ಅಂತರಾಷ್ಟ್ರೀಯ

ಕೊಹ್ಲಿ ಪಾಕ್ ನಲ್ಲಿ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಆಟಗಾರ: ವಾಸಿಂ ಆಕ್ರಮ್

Pinterest LinkedIn Tumblr


ನವದೆಹಲಿ: ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ವಾಸೀಂ ಆಕ್ರಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಏಷ್ಯಾದ ರಾಷ್ಟ್ರ ಟೆಸ್ಟ್ ಸರಣಿ ಗೆಲ್ಲುವುದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ವಾಸೀಂ ಆಕ್ರಮ್, ಕೊಹ್ಲಿ ಪಾಕಿಸ್ತಾನದಲ್ಲೂ ಪ್ರಸಿದ್ಧ ಕ್ರಿಕೆಟ್ ಆಟಗಾರ ಎಂದಿದ್ದಾರೆ.
ಅಗತ್ಯವಿರುವುದನ್ನು ಮಾಡಿದವರು ವಿಶ್ವ ಪ್ರಸಿದ್ಧಯಾಗುತ್ತಾರೆ. ಇದು ಪರಿಪೂರ್ಣ ಮನಸ್ಥಿತಿಯಿಂದ ಕೂಡಿದಾಗಿರುತ್ತದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲೂ ಪ್ರಸಿದ್ಧಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪಾಸ್ಟ್ ಬೌಲರ್ ಜಸ್ಪೀತ್ ಬೂಮ್ರಾ ಹೆಚ್ಚಿನ ಪರಿಣಾಮಕಾರಿಯುಳ್ಳ ಯಾರ್ಕರ್ ಎಂದು ವಾಸೀಂ ಆಕ್ರಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಬಾರಿಗೆ ಭಾರತ ಟೆಸ್ಟ್ ಸರಣಿ ಜಯಿಸುವುದರಲ್ಲಿ ಬೂಮ್ರಾ ಪ್ರಮುಖ ಪಾತ್ರ ವಹಿಸಿದ್ದರು. ವಿರಾಟ್ ಕೊಹ್ಲಿ ಅವರ ವ್ಯವಸ್ಥಿತ ನಿರ್ವಹಣೆಯಲ್ಲಿ ಬೂಮ್ರಾ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈಗ ಪಾಸ್ಟ್ ಬೌಲರ್ ಗಳಲ್ಲಿ ಜಸ್ಪ್ರೀತ್ ಬೂಮ್ರಾ ಹೆಚ್ಚಿನ ಪರಿಣಾಮಕಾರಿಯುಳ್ಳ ಯಾರ್ಕರ್ ಆಗಿದ್ದಾರೆ ಎಂದು ಪಿಐಟಿ ಜೊತೆಗಿನ ಸಂವಾದದಲ್ಲಿ ವಾಸೀಂ ಆಕ್ರಮ್ ಹೇಳಿದ್ದಾರೆ.
ಯಾರ್ಕರ್ ಎಸೆತದಲ್ಲಿ ಬೂಮ್ರಾ ವಿಶೇಷ ಸಾಮರ್ಥ್ಯ ಹೊಂದಿದ್ದು, ಈ ವರ್ಷ ನಡೆಯಲಿರುವ ವಿಶ್ವ ಕಪ್ ಕ್ರಿಕೆಟ್ ನಲ್ಲೂ ಬೂಮ್ರಾ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸುಲ್ತಾನ್ ಆಪ್ ಸ್ವಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.