ಕ್ರೀಡೆ

ಪೇಟಾ ಚಿತ್ರದ ಕ್ರೇಜ್‍- ಚಿತ್ರಮಂದಿರದ ಹೊರಗೆ ಮದುವೆಯಾದ ಜೋಡಿ

Pinterest LinkedIn Tumblr


ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಪೇಟಾ’ ಸಿನಿಮಾದ ಕ್ರೇಜ್‍ನಿಂದ ಥಿಯೇಟರ್ ಹೊರಗೆ ಜೋಡಿ ಮದುವೆಯಾದ ಅಪರೂಪದ ಕ್ಷಣವೊಂದು ಚೆನ್ನೈನಲ್ಲಿ ನಡೆದಿದೆ.

ರಜನಿಕಾಂತ್ ಅಭಿಮಾನಿಗಳಾಗಿರುವ ಅನ್‍ಬರಸುರ್ ಹಾಗೂ ಕಾಮಾಕ್ಷಿ ರಾಯಪೇಟೆಯಲ್ಲಿರುವ ವುಡ್‍ಲ್ಯಾಂಡ್ ಚಿತ್ರಮಂದಿರದ ಹೊರಗೆ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗಾಗಿಯೇ ಚಿತ್ರಮಂದಿರದ ಹೊರಗೆ ಒಂದು ವೇದಿಕೆಯನ್ನು ಕೂಡ ನಿರ್ಮಿಸಲಾಗಿತ್ತು.

ಅನ್‍ಬರಸುರ್ ಹಾಗೂ ಕಾಮಾಕ್ಷಿ ಮದುವೆ ಬಳಿಕ ಚಿತ್ರ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರಿಗೆ ಊಟವನ್ನು ಸಹ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಸಿನಿಮಾ ಶುರುವಾಗುವ ಮೊದಲೇ ಅನ್‍ಬರಸುರ್, ಕಾಮಾಕ್ಷಿ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ. ಬಳಿಕ ಅದೇ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.

ಪೇಟಾ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟ ವಿಜಯ್ ಸೇತುಪತಿ, ಸಸಿಕುಮಾರ್, ಸಿಮ್ರಾನ್, ತ್ರಿಷಾ, ಮಹೇಂದ್ರನ್, ಬಾಬಿ ಸಿಂಹ ಹಾಗೂ ಗುರು ಸೋಮಸುಂದರಂ ನಟಿಸಿದ್ದಾರೆ.

Comments are closed.