ರಾಷ್ಟ್ರೀಯ

130 ವರ್ಷದ ಮೊಸಳೆ ಸಾವು: ಛತ್ತೀಸ್‌ಗಢದ ಗ್ರಾಮಸ್ಥರಿಂದ ಅಂತ್ಯಸಂಸ್ಕಾರ, ದೇಗುಲ ಕಟ್ಟಲು ಚಿಂತನೆ

Pinterest LinkedIn Tumblr


ರಾಯ್‌ಪುರ: 130 ವರ್ಷಗಳಿಂದ ಛತ್ತೀಸ್‌ಗಢದ ಬೆಮೆತ್ರ ಜಿಲ್ಲೆಯ ಬಾವಮೊಹಾತ್ರ ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿದ್ದ ಗಂಗಾರಾಮ್ ಹೆಸರಿನ ಮೊಸಳೆ ಮೃತಪಟ್ಟಿದೆ. ಗ್ರಾಮಸ್ಥರು ಅಂತ್ಯಸಂಸ್ಕಾರದ ಮೂಲಕ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

3.4 ಮೀಟರ್ ಉದ್ದ ಹಾಗೂ ಸುಮಾರು 250 ಕೆ.ಜಿ ತೂಕದ ಮೊಸಳೆ ಗ್ರಾಮದ ಕೆರೆಯಲ್ಲಿ ಮಂಗಳವಾರ ಅಸುನೀಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ್ದರು.

ಗಂಗಾರಾಮ್ ಮೃತಪಟ್ಟ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸಲು ನಿರ್ಧರಿಸಿದ್ದೇವೆ ಎಂದು ಹೇಳಿರುವ ಗ್ರಾಮದ ಸರ್‌ಪಂಚ್ ಮೋಹನ್ ಸಾಹು, ನಮ್ಮನೆಲ್ಲ ಅಗಲಿದೆ ಮೊಸಳೆಯ ನೆನಪಿಗೆ ದೇಗುಲ ಕಟ್ಟುವ ಚಿಂತನೆಯೂ ಇದೆ ಎಂದು ತಿಳಿಸಿದ್ದಾರೆ.

130 ವರ್ಷದ ಮೊಸಳೆ ಸಾವು: ಛತ್ತೀಸ್‌ಗಢದ ಗ್ರಾಮವೊಂದರಲ್ಲಿ ನೀರವ ಮೌನ!

ಮೊಸಳೆಯ ಅಂತ್ಯಸಂಸ್ಕಾರದಲ್ಲಿ ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಭಾಗಿಯಾಗಿದ್ದರು. ಘಟನೆಯಿಂದ ದುಃಖೀತರಾದ ಗ್ರಾಮಸ್ಥರು ಒಂದು ದಿನ ಮನೆಯಲ್ಲಿ ಅಡುಗೆ ಮಾಡದೇ ಕಣ್ಣೀರು ಸುರಿಸುತ್ತ ಕುಳಿತಿದ್ದರು.

130 ವರ್ಷದ ಮೊಸಳೆ ಸಾವು: ಛತ್ತೀಸ್‌ಗಢದ ಗ್ರಾಮವೊಂದರಲ್ಲಿ ನೀರವ ಮೌನ!

ಗಂಗಾರಾಮ್ ಹೆಸರಿನ ಈ ಮೊಸಳೆ ಗ್ರಾಮದ ಕೆರೆಯಲ್ಲಿ ಸುಮಾರು 100 ವರ್ಷಗಳಿಂದಲೂ ಇತ್ತು. ಮೊಸಳೆಯ ಪೂರ್ವಿಕರು ಸಹ ಇದೇ ಕೆರೆಯಲ್ಲಿ ವಾಸವಿದ್ದರು ಎಂದು ಕೇಳಿರುವ ನೆನಪು ಕೂಡ ಇದೆ. ಮೊಸಳೆಯನ್ನು ಗ್ರಾಮಸ್ಥರು ದೇವರೆಂದೆ ಭಾವಿಸಿದ್ದಾರೆ. ಅದು ಕೆರೆಯಲ್ಲಿದ್ದಾಗ ಮಕ್ಕಳು ಯಾವುದೇ ಅಂಜಿಕೆ ಇಲ್ಲದೇ ಈಜುತ್ತಿದ್ದರು ಎಂದು ಸಾಹು ಹೇಳಿಕೊಂಡಿದ್ದಾರೆ.

ಗ್ರಾಮಸ್ಥರು ಮೊಸಳೆಯ ಜತೆ ಅವಿನಾಭಾವ ಸಂಬಂಧ ಹೊಂದಿರುವ ಕಾರಣ ಮೊಸಳೆಯ ಮೃತದೇಹವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದೇವೆ ಎಂದು ಹೇಳಿರುವ ಅರಣ್ಯಾಧಿಕಾರಿ ಆರ್‌.ಕೆ.ಸಿನ್ಹಾ, ಮೊಸಳೆ ಮೇಲಿರುವ ಗ್ರಾಮಸ್ಥರ ಪ್ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Comments are closed.