ಕ್ರೀಡೆ

ಮೇರಿ ಕೋಮ್​ ರ ಒಂದು ಲವ್​ ಸ್ಟೋರಿ

Pinterest LinkedIn Tumblr


ಭಾರತೀಯ ಮಹಿಳಾ ಬಾಕ್ಸಿಂಗ್​ ಪಟು ಮೇರಿ ಕೋಮ್​ ಹೆಸರು ಎಲ್ಲರಿಗೂ ಚಿರಪರಿಚಿತ. ಆಕೆ ಮಾಡಿದ ಸಾಧನೆ ಇಡೀ ದೇಶಕ್ಕೆ ಒಂದು ಹೆಮ್ಮೆ. ಈಶಾನ್ಯ ಭಾರತದ ಮಣಿಪುರ ರಾಜ್ಯದ ಕೋಮ್​ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಮೇರಿ ಬಡತನದಲ್ಲೇ ಹುಟ್ಟಿ ಬೆಳೆದು, ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತ ಸಾಧನೆ ಮಾಡಿದ್ದಾರೆ. ಕೋಮ್ ಅವರ ಸಾಧನೆಯ ಹಾದಿಯ ಜೊತೆಯಲ್ಲೇ ಸಾಗಿಬಂದಿದ್ದು, ಪ್ರೀತಿ- ಮದುವೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ ಮ್ಯಾಗ್ಟೆ ಜಂಗ್ನೆಜಿಯಂಗ್ ಮೇರಿ ಕೋಮ್ ಎರಡು ವರ್ಷಗಳ ಕಾಲ ತಮ್ಮ ಮನೆಯಿಂದ ದೂರ ಹೋಗಿದ್ದರು. ಅದು, 2000 ನೇ ಇಸವಿ, ದೆಹಲಿಯಲ್ಲಿದ್ದ ಸಮಯ. ಮೇರಿ ಒಂಟಿಯಾಗಿ ಕಠಿಣ ಬಾಕ್ಸಿಂಗ್​ ತರಬೇತಿ ಪಡೆಯುತ್ತಿದ್ದರು. ಆಗ ಮೇರಿ ಕೋಮ್​ಗೆ ಹಿಂದಿಯಾಗಲೀ, ಇಂಗ್ಲೀಷ್​ ಆಗಲಿ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಕೋಮ್​ ಪ್ರದೇಶದ ಬುಡಕಟ್ಟು ಭಾಷೆ ಮಾತ್ರ ಆಕೆಗೆ ತಿಳಿದಿತ್ತು. ಮೇರಿಗೆ ಏಕಾಂಗಿಯಾಗಿರುವುದು ಇಷ್ಟವಿರಲಿಲ್ಲ. ತುಂಬಾ ಸಲ ಮೇರಿ ತನಗೆ ಸಹಾಯ ಮಾಡಿದ ಹಾಗೂ ಮಾರ್ಗದರ್ಶನ ನೀಡಿದವರನ್ನು ನೆನಪಿಸಿಕೊಳ್ಳುತ್ತಿದ್ದರು.

ಒಂದು ದಿನ ಆಕೆ ತರಬೇತಿಯಲ್ಲಿದ್ದಾಗ, ಯಾರೋ ತನ್ನನ್ನು ಭೇಟಿ ಮಾಡಲು ಬಂದಿದ್ದಾರೆ ಎಂದು ಕೋಮ್​ಗೆ ತಿಳಿಯುತ್ತದೆ. ಆಗ ನಂಬಲು ಸಾಧ್ಯವಾಗಲಿಲ್ಲ, ಏಕೆಂದರೆ ಮೇರಿ ದೆಹಲಿಗೆ ಬಂದ ಮೇಲೆ ಯಾರನ್ನೂ ಭೇಟಿ ಮಾಡಿರಲಿಲ್ಲ. ಬಂದಿದ್ದ ಇಬ್ಬರು ಯುವಕರಲ್ಲಿ ಒಬ್ಬ ಓನ್ಲೆರ್​. ಮತ್ತೊಬ್ಬ ಆತನ ಸಹೋದ್ಯೋಗಿ. ಮೇರಿಗೆ ಇಬ್ಬರ ಪರಿಚಯವೂ ಇಲ್ಲ, ಆಕೆ ಗೊಂದಲದಿಂದಲೇ ನೋಡಿದಳು.

ಈ ಅಪರಿಚಿತರ ಭೇಟಿಯು ಮುಂಬರುವ ವರ್ಷಗಳಲ್ಲಿ ತನ್ನ ಜೀವನವನ್ನೇ ಬದಲಾಯಿಸುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ. ಓನ್ಲರ್​ ಅವರು ಕೋಮ್​-ರಿಮ್​ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ. ದೆಹಲಿಯಲ್ಲಿ ಅಧ್ಯಯನ ಮಾಡುವ ಈಶಾನ್ಯ ಭಾಗದ ವಿದ್ಯಾರ್ಥಿಗಳಿಗೆ ಈ ಒಕ್ಕೂಟ ನೆರವಾಗಿತ್ತು. ಓನ್ಲರ್​ ಈ ಕಾರಣದಿಂಲೇ ಮೇರಿ ಕೋಮ್​ನ್ನು ಭೇಟಿಯಾಗಲು ದೆಹಲಿಗೆ ಬಂದಿರುತ್ತಾರೆ.

ನಾನು ಮೊದಲ ಬಾರಿಗೆ ನೋಡಿದಾಗ ಅಣ್ಣ ಎನಿಸಿತು:

ಆ ಸಮಯದಲ್ಲಿ ಓನ್ಲರ್​ ನನ್ನ ಹಿತ ಬಯಸುವ ದೊಡ್ಡ ವ್ಯಕ್ತಿಯಂತೆ ಕಾಣಿಸಿದರು. ದೊಡ್ಡ ಅಣ್ಣನಂತೆ ಕಂಡರು. ರಜೆ ತೆಗೆದುಕೊಂಡಾಗ, ನಿಮಗೆ ಅಗತ್ಯ ಇದ್ದಾಗ ಯಾವುದೇ ಹಿಂಜರಿಕೆ ಇಲ್ಲದೆ ಕರೆಮಾಡಿ, ಸಂಪರ್ಕದಲ್ಲಿರಿ ಎಂದು ಓನ್ಲರ್​​ ಮೇರಿಗೆ ಹೇಳುತ್ತಿದ್ದರು. ಆಗ ಮೇರಿಗೆ ಒಂದು ರೀತಿಯ ಸಮಾಧಾನ ಸಿಗುತ್ತಿತ್ತು. ಆಕೆ ಸ್ವಲ್ಪ ಸಮಯ ಯೋಚಿಸಿ ನಂತರ ಕರೆ ಮಾಡಿ ಮಾತನಾಡುತ್ತಿದ್ದಳು.

ಒಂದು ವಸ್ತು ನಮ್ಮ ಸ್ನೇಹವನ್ನು ಗಟ್ಟಿಗೊಳಿಸಿತು:

ಮೇರಿ ಕೋಮ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಾಸ್​ಪೋರ್ಟ್​​ ಕಳೆದುಕೊಂಡಿದ್ದು, ಮೇರಿ ಮತ್ತು ಓನ್ಲರ್​ ಸ್ನೇಹ ಸಂಬಂಧ ಗಟ್ಟಿಯಾಗಲು ಪ್ರಮುಖ ಕಾರಣವಾಯಿತು. ಕೆಲವು ತಿಂಗಳ ನಂತರ ಮೇರಿ ಅಂತಾರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಇದು ಆಕೆಯ ಮೊದಲ ವಿದೇಶ ಭೇಟಿಯಾಗಿರುತ್ತದೆ. ಆದರೆ ಈ ವೇಳೆ ಮೇರಿ ಪಾಸ್​ಪೋರ್ಟ್​ ಕಳೆದುಕೊಂಡು ದುಃಖಿತಳಾಗುತ್ತಾಳೆ. ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಆಗುವುದಿಲ್ಲ. ಆ ಸಮಯದಲ್ಲಿ ಓನ್ಲರ್​ ಆಕೆಯ ಜೊತೆಗಿದ್ದು, ಧೈರ್ಯ ತುಂಬುತ್ತಾನೆ. ಮಣಿಪುರ್​​ನಿಂದ ಮತ್ತೊಂದು ಪಾಸ್​ಪೋರ್ಟ್​​ ತಂದು ದೆಹಲಿಗೆ ವಾಪಸ್ಸಾದರು. ಆಕೆಗೆ ಅಲ್ಲಿಂದ ಓನ್ಲರ್​ ಮೇಲೆ ವಿಶ್ವಾಸ ಬೆಳೆಯಲು ಶುರುವಾಯಿತು. ತನ್ನನ್ನು ಕಾಳಜಿ ಮಾಡುವ ಓನ್ಲರ್​ ಜೊತೆ ಮೇರಿ ತನ್ನೆಲ್ಲಾ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಳು. ಕ್ರಮೇಣ ಇಬ್ಬರ ನಡುವಣ ಬಾಂಧವ್ಯ ಗಟ್ಟಿಯಾಗುತ್ತಾ ಹೋಯಿತು.

ನಾನು ಅವನನ್ನು ಇಷ್ಟಪಡಲು ಶುರು ಮಾಡಿದೆ:

2001 ರಲ್ಲಿ ಮೇರಿ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಾಗ, ಓನ್ಲರ್​ ಆಕೆಗೆ ತುಂಬಾ ಸಹಾಯ ಮಾಡುತ್ತಾನೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಆಕೆ ಬೆಳ್ಳಿ ಪದಕ ಗೆದ್ದು ಮರಳಿದಾಗ ಖುಷಿ ಪಡುತ್ತಾಳೆ. ಆಗ ಇಬ್ಬರೂ ಸಹ ಇನ್ನೂ ಹತ್ತಿರವಾಗುತ್ತಾರೆ.
‘ ನಾನು ಓನ್ಲರ್​ನನ್ನು ಇಷ್ಟಪಡಲು ಶುರುಮಾಡಿದೆ. ನನ್ನ ಜೀವನವು ಪ್ರವಾಸ ಮತ್ತು ತರಬೇತಿಗೆ ಮೀಸಲಾಯಿತು. ಮಹಿಳಾ ಬಾಕ್ಸಿಂಗ್​ ಹೆಚ್ಚು ಜನಪ್ರಿಯವಾಗುತ್ತಿರುವ ಸಮಯದಲ್ಲಿ ನಾನು ಸಹ ತರಬೇತಿಯಲ್ಲಿ ಕಾರ್ಯನಿರತಳಾದೆ. ಭಾನುವಾರ ಸಿಕ್ಕಾಗಲೆಲ್ಲಾ ನಾನು ಓನ್ಲೆರ್​ನ್ನು ಭೇಟಿ ಮಾಡಲು ಇಚ್ಛಿಸುತ್ತಿದ್ದೆ. ನಾನು ಖಿನ್ನತೆಗೆ ಒಳಗಾಗಿದ್ದರೆ, ಅವರನ್ನು ಭೇಟಿ ಮಾಡಿದಾಕ್ಷಣ ತುಂಬಾ ಖುಷಿಯಾಗುತ್ತಿದ್ದೆ” ಎಂದು ಹೇಳಿಕೊಂಡಿದ್ದಾರೆ.

ನಮ್ಮಿಬ್ಬರ ಹಿನ್ನೆಲೆ, ಭಾಷೆ ಒಂದೇ ಆಗಿತ್ತು. ನನ್ನ ಯಶಸ್ಸನ್ನು ಬಯಸಿದ ನಿಜವಾದ ವ್ಯಕ್ತಿ ಓನ್ಲೆರ್​. ಆ ಸಮಯದಲ್ಲಿ ಓನ್ಲೆರ್​ ಮತ್ತು ಆತನ ನೆಚ್ಚಿನ ಗೆಳೆಯ ಇಬ್ಬರು ದೂರಾಗುತ್ತಾರೆ. ಓನ್ಲೆರ್​ ನನ್ನ ಜೊತೆ ಸಲುಗೆಯಿಂದ ಇದ್ದಿದ್ದರಿಂದ ಆತ ಎಲ್ಲವನ್ನೂ ನನ್ನ ಜೊತೆ ಹಂಚಿಕೊಳ್ಳುತ್ತಿದ್ದ. ಅದೇ ಸಮಯದಲ್ಲಿ ಆತನ ತಾಯಿ ಸಾವನ್ನಪ್ಪುತ್ತಾರೆ. ಓನ್ಲೆರ್ ತುಂಬಾ ದುಃಖಿತನಾಗಿ ವಾಪಸ್​ ಊರಿಗೆ ತೆರಳಲು ನಿರ್ಧರಿಸುತ್ತಾನೆ. ಆದರೆ ನಾನು ಮತ್ತು ಓನ್ಲೆರ್​ ತಂದೆ ಎಲ್​ಎಲ್​ಬಿ ಮುಗಿಸುವಂತೆ ಹೇಳಿದೆವು’ ಎಂದರು.

ಮದುವೆ ಪ್ರಸ್ತಾಪಗಳು ಬರಲು ಶುರು:

2003 ರಲ್ಲಿ ನನಗೆ ಅರ್ಜುನ ಪ್ರಶಸ್ತಿ ಬಂದಿತು. ಇದರ ನಂತರ ನನ್ನ ಕುಟುಂಬದವರು ನನಗೆ ಮದುವೆ ಮಾಡಲು ನಿರ್ಧರಿಸಿದರು. ಹಲವಾರು ಅಭಿಮಾನಿಗಳು ನನ್ನನ್ನು ಭೇಟಿಯಾಗಲು ಬಯಸಿದರು. ಆಗ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಯಿತು. ಈ ಎಲ್ಲಾ ವಿಚಾರವನ್ನು ಓನ್ಲೆರ್​ಗೆ ತಿಳಿಸಿದೆ. ಆತ ತಕ್ಷಣ, ಮೇರಿ, ನಿಜವಾಗಲೂ ನೀನು ಮದುವೆಯಾಗಲು ಬಯಸುತ್ತೀಯಾ? ಎಂದು ಕೇಳಿದ. ಆದರೆ ನಾನು ಏನನ್ನು ಮಾತನಾಡಲಿಲ್ಲ. ಮದುವೆ ನನಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಹೇಳಿದೆ.

ಅವನು ಹೇಳಲು ಬಯಸಿದ್ದೇನು?
ನನಗೆ ಬರುತ್ತಿದ್ದ ಮದುವೆ ಪ್ರಸ್ತಾಪಗಳ ಬಗ್ಗೆ ಓನ್ಲೆರ್​ಗೆ ತಿಳಿದಿತ್ತು. ಆತ ತುಂಬಾ ಚಿಂತೆಗೊಳಗಾಗಿದ್ದ. ನನ್ನ ಬಗ್ಗೆ ಆತ ತುಂಬಾ ಭಾವತೀವ್ರತೆಗೆ ಒಳಗಾಗಿದ್ದಾನೆ ಎಂಬುದು ಅರ್ಥವಾಯಿತು. ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮನೆಯವರು ಮದುವೆ ಮಾಡುತ್ತಿದ್ದಾರೆ ಎಂದು ಆತ ಬೇಸರ ಮಾಡಿಕೊಂಡಿದ್ದ. ಒಂದು ದಿನ ಓನ್ಲೆರ್ ಮೇರಿಗೆ ಕರೆ ಮಾಡಿ, ಇಷ್ಟಪಡುತ್ತಿರುವುದಾಗಿ ಹೇಳಲು ಪ್ರಯತ್ನಿಸುತ್ತಾನೆ. ಆದರೆ ಹೇಳುವುದಿಲ್ಲ. ಮೇರಿಗೆ ಇದು ಅರ್ಥವಾಗುತ್ತದೆ. ಕೆಲವು ದಿನಗಳ ಬಳಿಕ, ​ನನಗೆ ಮದುವೆ ನಿಶ್ಚಯವಾಗಿರುವ ವಿಷಯ, ನಾನು ಏನು ಮಾಡಲಾಗದ ಪರಿಸ್ಥಿತಿ ಆತನಿಗೆ ತಿಳಿಯುತ್ತದೆ. ನಾನು ಓನ್ಲರ್​ನಿಂದ ಆದಷ್ಟು ದೂರ ಇರಲು ಪ್ರಾರಂಭಿಸಿದೆ. ತುಂಬಾ ದಿನಗಳ ಕಾಲ ನಾನು ಅವನನ್ನು ಭೇಟಿ ಮಾಡಲೇ ಇಲ್ಲ. ಮುಂದೆ ಒಂದು ದಿನ ನಾವು ಭೇಟಿಯಾದಾಗ, ಓನ್ಲರ್​ ನೇರವಾಗಿ ನನ್ನ ಬಳಿ ಬಂದು ಪ್ರೀತಿಸುತ್ತಿರುವುದಾಗಿ ಹೇಳಿದ.

ಮದುವೆ ಬಗ್ಗೆ ಮೊದಲ ಮಾತು

ಒಂದು ದಿನ ಓನ್ಲರ್​ ನನ್ನ ಬಳಿ ಬಂದು, ನಾನು ನಿನ್ನ ಅಪ್ಪ-ಅಮ್ಮನನ್ನು ಭೇಟಿ ಮಾಡಬೇಕು. ಅವರಿಗೆ ನಾನು ಇಷ್ಟವಾದರೆ, ನಾನು ನಿನ್ನನ್ನು ಯಾಕೆ ಮದುವೆಯಾಗುತ್ತೇನೆ ಎಂಬುದನ್ನು ಹೇಳುತ್ತೇನೆ ಎಂದನು. ಆತನ ಉದ್ದೇಶ ನನ್ನನ್ನು ಮದುವೆಯಾಗುವುದು ಎಂಬುದು ತಿಳಿದು ಗಾಬರಿಯಾದೆ. ಆದರೆ ಓನ್ಲರ್​ನಂತಹ ಬಾಳ ಸಂಗಾತಿ ತನಗೆ ಸಿಗುವುದಿಲ್ಲ ಎಂಬುದು ನನಗೆ ಗೊತ್ತಿತ್ತು.

ಪಂದ್ಯಗಳಿಗೆ ಕುಟುಂಬ ಅಡಚಣೆ:

ಇಬ್ಬರೂ ಪಂದ್ಯ ಆಡುವುದು ಓನ್ಲೆರ್ ತಂದೆಗೆ ಇಷ್ಟವಿದ್ದರೂ, ಮೇರಿ ತಂದೆಗೆ ಇಷ್ಟವಿರಲಿಲ್ಲ. “ನನಗೆ ನನ್ನ ತಂದೆಯ ಕೋಪದ ಬಗ್ಗೆ ಚೆನ್ನಾಗಿ ಗೊತ್ತು, ನಾನು ಅವರ ಜೊತೆ ಮಾತನಾಡಲು ಹೆದರುತ್ತೇನೆ. ನಾನು ಓನ್ಲರ್​ ಜೊತೆ ಪಂದ್ಯ ಆಡುವುದು ಅವರಿಗೆ ಇಷ್ಟವಿಲ್ಲ. ಕೊನೆಗೆ 2004 ರಲ್ಲಿ ನಾನು ಮತ್ತು ಓನ್ಲೆರ್​​ ಮಣಿಪುರಕ್ಕೆ ಪಂದ್ಯ ಆಡಲು ಹೋದೆವು. ನಾನು ಮನೆಗೆ ಹೋದಾಗ, ಆತ ನನ್ನ ತಂದೆಯನ್ನು ಭೇಟಿ ಮಾಡಲು ಬರುತ್ತಾನೆ. ನನ್ನ ಅಪ್ಪನ ಜೊತೆಗಿನ ಅವನ ಭೇಟಿ ಅಷ್ಟಾಗಿ ಚೆನ್ನಾಗಿರಲಿಲ್ಲ. ಯಾಕೆಂದರೆ ನನ್ನ ಅಪ್ಪ ಓನ್ಲರ್​ ಜೊತೆ ತುಂಬಾ ಅಸಭ್ಯವಾಗಿ ವರ್ತಿಸಿದ್ದರು. ನನ್ನ ಸಹವಾಸಕ್ಕೆ ಬಾರದಂತೆ, ದೂರ ಇರುವಂತೆ ಬೆದರಿಕೆ ಹಾಕಿದ್ದರು. ಆಗ ಓನ್ಲೆರ್​ ನನ್ನ ಅಪ್ಪನಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದ. ಆದರೆ ಪ್ರಯತ್ನ ವಿಫಲವಾಯಿತು.

ಮೇರಿಯ ತಂದೆ ಓನ್ಲೆರ್​ನ್ನು ಅಸಭ್ಯವಾಗಿ ನಡೆಸಿಕೊಂಡರು:
ಮೇರಿ ಕೋಮ್​ ತಂದೆ ಓನ್ಲೆರ್​ ಜೊತೆ ಅಸಭ್ಯವಾಗಿ ವರ್ತಿಸಿದರು. ಅವನು ಮನೆ ಬಿಟ್ಟು ಹೋಗುವಂತೆ ಮಾಡಿದರು. ಓನ್ಲೆರ್​ ಮನೆಯವರು ಯಾರೂ ಸಹ ನಮ್ಮ ಮನೆಗೆ ಬರುವಂತಿಲ್ಲ ಎಂದು ಹೇಳಿದ್ದರು. ಮೇರಿಗೆ ತನ್ನ ತಂದೆಯ ವರ್ತನೆ ಕಂಡು ಬಹಳ ಬೇಸರವಾಯಿತು. ಆಕೆ ತನ್ನ ಎಲ್ಲಾ ಲಗೇಜುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಹೋಗಿ ಓನ್ಲೆರ್​ ಜೊತೆ ಇಂಫಾಲ್​ನಲ್ಲಿ ಇದ್ದಳು. ನಾನು ನನ್ನ ಹೆತ್ತವರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಬಂದು ಮದುವೆಯಾದೆವು ಎಂದು ಮೇರಿ ಹೇಳುತ್ತಾಳೆ.

ಒಂದು ಕಪ್​ ಚಹಾ-ಮದುವೆ ಒಪ್ಪಂದ

ಓನ್ಲೆರ್​ ಎರಡು ಕುಟುಂಬಗಳ ಸಮ್ಮತಿಯೊಂದಿಗೆ ಮೇರಿಯನ್ನು ಮದುವೆಯಾಗಲು ಬಯಸಿದ್ದ. ಮೇರಿ ಮನೆ ಬಿಟ್ಟು ಬಂದ ನಂತರ ಆಕೆಯ ತಂದೆ ಮೇರಿಯ ಕೋಪದ ಬಗ್ಗೆ ಯೋಚಿಸಿ, ಮೃದುವಾಗತೊಡಗುತ್ತಾರೆ. ಮೊದಲನೇ ಬಾರಿಗೆ ಮೇರಿ ತನ್ನ ತಂದೆಯ ಜೊತೆ ನೇರವಾಗಿ ಮಾತನಾಡುತ್ತಾಳೆ. ಅಂತಿಮವಾಗಿ, ಅವರು ಕ್ಷಮೆಯಾಚಿಸಿದರು. ಈ ಸಮಯದಲ್ಲಿ, ಓನ್ಲೆರ್​ ಕುಟುಂಬದ ಸದಸ್ಯರು ಮೇರಿ ತಂದೆಗೆ ಚಹಾವನ್ನು ನೀಡಿದಾಗ, ಸಂಪ್ರದಾಯದ ಪ್ರಕಾರ ಟೀ ತೆಗೆದುಕೊಂಡು ಒಪ್ಪಿಗೆ ಸೂಚಿಸುತ್ತಾರೆ. ಈ ಸಂಪ್ರದಾಯ ಮೂರು ಬಾರಿ ಪುನರಾವರ್ತನೆಯಾಗುತ್ತದೆ ಮತ್ತು ಎಲ್ಲಾ ಮೂರು ಸಂದರ್ಭಗಳಲ್ಲಿ ಈ ಕುಟುಂಬದವರು ಈ ಚಹಾವನ್ನು ಕುಡಿಯಬೇಕು.

ಸಾಂಪ್ರದಾಯಿಕ ಮದುವೆ:
ಈ ಮೂರು ಬಾರಿ ಚಹಾ ನೀಡುವ ಸಂಪ್ರದಾಯ ಮುಗಿದ ಮೇಲೆ ಮೇರಿಯ ಕುಟುಂಬದವರು ಮದುವೆಗೆ ಒಪ್ಪಿಕೊಳ್ಳುತ್ತಾರೆ. ಸಾಂಪ್ರದಾಯಿಕವಾಗಿ ಮದುವೆ ಮಾಡಲು ನಿರ್ಧರಿಸುತ್ತಾರೆ. ಆಕೆಯ ವೈವಾಹಿಕ ಜೀವನದಲ್ಲಿ ಸಂತೋಷವೇ ತುಂಬಿದೆ. ಮೇರಿ ದಂಪತಿಗೆ ಮೂವರು ಮಕ್ಕಳಿದ್ದಾರೆ.

Comments are closed.