ರಾಷ್ಟ್ರೀಯ

ಲ್ಯಾಪ್‌ಟಾಪ್‌ ಕದ್ದ ಮೇಲೆ ಕಳ್ಳ ಮಾಡಿದ್ದೇನು?

Pinterest LinkedIn Tumblr


ಕಳ್ಳನೊಬ್ಬನ ವಿಚಾರ ಟ್ವಿಟರ್‌ನಲ್ಲಿ ಸಖತ್ ಚರ್ಚೆ ಆಗಿದೆ. ಟ್ವಿಟರ್‌ನಲ್ಲಿ ಸದಾ ಕ್ರಿಯಾಶೀಲವಾಗಿರುವ ಸ್ಟೀವ್ ವ್ಯಾಲಂಟೈನ್ ಹಂಚಿಕೊಂಡಿರುವ ಪೋಟೋ ವೈರಲ್ ಆಗಿದೆ.

ಲ್ಯಾಪ್ ಟಾಪ್ ಕದ್ದುಕೊಂಡು ಹೋಗಿದ್ದ ಕಳ್ಳ ಲ್ಯಾಪ್‌ ಟಾಪ್‌ನ ಅಸಲಿ ಮಾಲೀಕನಿಗೆ ಬರೆದ ಪತ್ರ ವೈರಲ್ ಆಗಿದೆ. ಕಳ್ಳ ಇ ಮೇಲೆ ರವಾನಿಸಿದ್ದಾನೆ. ಕಳ್ಳ ಕ್ಷಮೆ ಕೇಳಿರುವುದಲ್ಲದೇ ಕಾಲೇಜಿಗೆ ಸಂಬಂಧಿಸಿದ ಅಸೈನ್ ಮೆಂಟ್‌ಗಳು ಇದ್ದರೆ ವಾಪಸ್ ಕೊಡುವುದಾಗಿಯೂ ಹೇಳಿದ್ದಾನೆ.

ದಯವಿಟ್ಟು ನನ್ನ ಕ್ಷಮಿಸಿ.. ನಾನು ಕಡು ಬಡವ.. ಹಣಕ್ಕಾಗಿ ನಿಮ್ಮ ಲ್ಯಾಪ್‌ಟಾಪ್ ಅನಿವಾರ್ಯವಾಗಿ ಕಳ್ಳತನ ಮಾಡಿದ್ದೇನೆ. ನಿಮ್ಮ ಪೋನ್ ಮತ್ತು ವಾಲೆಟ್ ಮುಟ್ಟಿಲ್ಲ. ಅದರಿಂದ ನಿಮಗೆ ಕೊಂಚ ಸಹಾಯ ಆಗಿದೆ ಎಂದು ಭಾವಿಸಿದ್ದೇನೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ. ಇದರಲ್ಲಿ ಇರುವ ಡ್ಯಾಕ್ಯುಮೆಂಟ್‌ಗಳು ಬೇಕಾದರೆ ಕೇಳಿ..ಕಳುಹಿಸಿ ಕೊಡುತ್ತೇನೆ ಎಂದು ಸಹ ಕಳ್ಳ ಆಫರ್ ನೀಡಿದ್ದಾನೆ.

Comments are closed.