ರಾಷ್ಟ್ರೀಯ

ಸೊಸೆಯ ಮದುವೆ ಮಾಡಿದ ಅತ್ತೆ-ಮಾವ

Pinterest LinkedIn Tumblr


ಡೆಹ್ರಾಡೂನ್: ತಂದೆ ಸ್ಥಾನದಲ್ಲಿ ನಿಂತು ಮಾವ ತನ್ನ ಸೊಸೆಯ ಮದುವೆಯನ್ನು ಅದ್ಧೂರಿಯಾಗಿ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ವಿಜಯ್ ಚಂದ್ ಅವರು 2014ರಲ್ಲಿ ತಮ್ಮ ಮಗ ಸಂದೀಪ್ ಮದುವೆಯನ್ನು ಕವಿತಾ ಜೊತೆ ಮಾಡಿಸಿದ್ದರು. ಸಂದೀಪ್ ಹಾಗೂ ಕವಿತಾ ಕುಟುಂಬದಲ್ಲಿ ಎಲ್ಲರು ಖುಷಿಯಾಗಿದ್ದರು. 2015ರಲ್ಲಿ ಕುಟುಂಬದವರು ಎಲ್ಲರೂ ಹರಿದ್ವಾರಕ್ಕೆ ಹೋಗಿದ್ದಾಗ ಅಲ್ಲಿ ಸಂದೀಪ್ ಮೃತಪಟ್ಟಿದ್ದಾರೆ.

ಸಂದೀಪ್ ಮೃತಪಟ್ಟ ಬಳಿಕ ಅವರ ತಂದೆ ವಿಜಯ್ ಚಂದ್ ಹಾಗೂ ಅವರ ಪತ್ನಿ ಕಮಲ ಅವರು ಕವಿತಾಗೆ ಧೈರ್ಯ ತುಂಬಿದ್ದರು. ಆದರೆ ಕವಿತಾ ತನ್ನ ಪತಿ ಸಂದೀಪ್ ಮೃತಪಟ್ಟ ಮೇಲೆ ತನ್ನ ತವರು ಮನೆಗೆ ಹೋಗಲು ನಿರ್ಧರಿಸಿದ್ದರು. ಕವಿತಾ ತನ್ನ ತವರು ಮನೆಗೆ ಹೋಗುವುದನ್ನು ತಂದೆ-ತಾಯಿ ಸ್ಥಾನದಲ್ಲಿರುವ ವಿಜಯ್ ಹಾಗೂ ಕಮಲಗೆ ತುಂಬಾ ದುಃಖವಾಯಿತು. ಆಗ ಅವರು ಕವಿತಾಗೆ ತನ್ನ ತವರು ಮನೆಗೆ ಹೋಗುವುದನ್ನು ತಡೆದು ಆಕೆಗೆ ಮತ್ತೊಂದು ಮದುವೆ ಮಾಡಿಸುವುದಾಗಿ ನಿರ್ಧರಿಸಿದ್ದರು.

ವಿಜಯ್ ಹಾಗೂ ಕಮಲ ತಮ್ಮ ಸೊಸೆ ಕವಿತಾ ಒಪ್ಪಿಗೆ ಪಡೆದು ಆಕೆಯನ್ನು ಮತ್ತೆ ಮದುವೆ ಮಾಡಿಸಲು ಹುಡುಗ ಹುಡುಕಲು ಶುರು ಮಾಡಿದ್ದರು. ಆಗ ರಿಷಿಕೇಶ್‍ನ ನಿವಾಸಿಯಾಗಿರುವ ತೇಜ್‍ಪಾಲ್ ಸಿಂಗ್ ಜೊತೆ ಕವಿತಾ ಮದುವೆಯನ್ನು ನಿಶ್ಚಿಯಿಸಿದರು.

ತೇಜ್‍ಪಾಲ್ ಹಾಗೂ ಕವಿತಾ ಮನೆಯವರು ಒಪ್ಪಿ ಇಬ್ಬರ ಮದುವೆಯನ್ನು ಮಾಡಿಸಿದ್ದರು. ತಮ್ಮ ಸ್ವಂತ ಮಗಳಿನಂತೆ ಕವಿತಾ ಮದುವೆ ಮಾಡಿಸಿ ಭಾವುಕರಾಗಿ ಪತಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ನಮ್ಮ ಸೊಸೆಯನ್ನು ಮಗಳ ರೀತಿ ನೋಡಿಕೊಂಡಿದ್ದೇವೆ. ಆಕೆ ಮತ್ತೆ ಮದುವೆಯಾಗಿ ಜೀವನ ನಡೆಸುತ್ತಿರುವುದು ಖುಷಿಯ ವಿಚಾರ ಎಂದು ವಿಜಯ್ ತಿಳಿಸಿದ್ದಾರೆ.

Comments are closed.