ಕ್ರೀಡೆ

ಆರ್​ಸಿಬಿ ತನ್ನಲ್ಲಿಯೇ ಉಳಿಸಿಕೊಂಡ 14 ಆಟಗಾರರಿಗೆ ನೀಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?

Pinterest LinkedIn Tumblr

ಬೆಂಗಳೂರು: 2019ರ ಐಪಿಎಲ್ ಟೂರ್ನಿಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಈಗಾಗಲೇ ತಂಡಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದು, ಡಿ. 18 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಜೊತೆಗೆ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೆಲ ಆಟಗಾರರನ್ನು ತಂಡ ಕೈ ಬಿಟ್ಟಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ತಯಾರು ಮಾಡುತ್ತಿದೆ. ಸದ್ಯ ಆರ್​​ಸಿಬಿ ಒಟ್ಟು 14 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಅವರು ಯಾರು ಹಾಗೂ ಅವರ ಸಂಭಾವನೆ ಎಷ್ಟು ಎಂಬ ಮಾಹಿತಿ ಇಲ್ಲಿವೆ ನೋಡಿ..

ಆರ್​​ಸಿಬಿ ತಂಡ ತನ್ನಲ್ಲೆ ಉಳಿಸಿಕೊಂಡ ಆಟಗಾರರು ಹಾಗೂ ಸಂಭಾವನೆ:

ವಿರಾಟ್ ಕೊಹ್ಲಿ- 17 ಕೋಟಿ

ಎಬಿ ಡಿವಿಲಿಯರ್ಸ್​​​- 11 ಕೋಟಿ

ಯಜುವೇಂದ್ರ ಚಹಾಲ್- 6 ಕೋಟಿ

ಉಮೇಶ್ ಯಾದವ್- 4.2 ಕೋಟಿ

ವಾಷಿಂಗ್ಟನ್ ಸುಂದರ್- 3.2 ಕೋಟಿ

ನವ್​ದೀಪ್ ಸೈನಿ- 3 ಕೋಟಿ

ಮೊಹಮ್ಮದ್ ಸಿರಾಜ್- 2.6 ಕೋಟಿ

ಕಾಲಿನ್ ಡಿ ಗ್ರಾಂಡ್ಹೋಮ್- 2.2 ಕೋಟಿ

ನಥನ್ ಕೌಲ್ಟರ್-ನೈಲ್- 2.2 ಕೋಟಿ

ಮೊಯೀನ್ ಅಲಿ-1.7 ಕೋಟಿ

ಪಾರ್ಥಿವ್ ಪಟೇಲ್-1.7 ಕೋಟಿ

ಪವನ್ ನೇಗಿ- 1 ಕೋಟಿ

ಟಿಮ್ ಸೌಥಿ- 1 ಕೋಟಿ

ಕುಲ್ವಂತ್ ಖೇಜ್ರೊಲಿಯಾ- 85 ಲಕ್ಷ

ಕಳೆದ ಆವೃತ್ತಿಯಲ್ಲಿ ಅವಕಾಶ ನೀಡಿದರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಮನ್​​ದೀಪ್ ಸಿಂಗ್ ಹಾಗೂ ಕ್ವಿಂಟನ್ ಡಿಕಾಕ್​ರನ್ನು ರಾಯಾಲ್ ಚಾಲೆಂಜರ್ಸ್​​ ಬೆಂಗಳೂರು ಈಗಾಗಲೇ ಬೇರೆ ತಂಡಕ್ಕೆ ಮಾರಾಟ ಮಾಡಿದೆ. ಉಳಿದಂತೆ ಬ್ರೆಂಡನ್ ಮೆಕಲಮ್, ಕೋರೆ ಆಂಡರ್ಸನ್, ಕ್ರಿಸ್ ವೋಕ್ಸ್​, ಸರ್ಫರಾಜ್ ಖಾನ್, ಅನಿರುದ್ಧ್ ಜೋಶಿ, ಪವನ್ ದೇಶಪಾಂಡೆ ಅವರನ್ನು ತಂಡದಿಂದ ಕೈ ಬಿಟ್ಟಿದೆ.

Comments are closed.