ಮನೋರಂಜನೆ

ಮತ್ತೆ ಮದುವೆಯಾಗಲು ಹೊರಟಿದ್ದಾರೆ ನಟಿ ರಾಖಿ ಸಾವಂತ್​ ! ವರ ಯಾರು ಗೊತ್ತಾ..?

Pinterest LinkedIn Tumblr

ರಾಖಿ ಸಾವಂತ್​ ಎಂದ ಕೂಡಲೇ ನೆನಪಾಗೋದು ಕೇವಲ ವಿವಾದಗಳು. ಹೌದು ಹೆಸರಿಗೆ ನಟಿಯಾದರೂ, ಅಭಿನಯ ಅಥವಾ ಸಿನಿಮಾಗಳಿಂದಾಗಿ ಸುದ್ದಿಯಾಗಲ ರಾಖಿ, ಸದಾ ಯಾವುದಾದರೊಂದು ವಿವಾದವನ್ನು ಮಾಡಿಕೊಳ್ಳುತ್ತಾ ಸದ್ದು ಮಾಡುತ್ತಲೇ ಇರುತ್ತಾರೆ.

ಇತ್ತೀಚೆಗೆ ನೆನಪಿಸಿಕೊಂಡರೆ, ನಟಿ ತನುಶ್ರೀ ದತ್ತಾ ವಿರುದ್ಧ ಅತ್ಯಾಚಾರದ ಆರೋಪ ಮಾಡುವುದರೊಂದಿಗೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ವಿದೇಶಿ ಮಹಿಳಾ ಬಾಕ್ಸರ್​ ಒಬ್ಬರಿಂದ ರಿಂಗ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿಕೊಂಡಿದ್ದರು.

ಇಷ್ಟೆಲ್ಲ ಆದ ನಂತರ ಈಗ ಇದ್ದಕ್ಕಿದ್ದಂತೆಯೇ ತಮ್ಮ ಮದುವೆ ದಿಣಾಂಕವನ್ನು ಪ್ರಕಟಿಸಿದ್ದಾರೆ. ಅದರಲ್ಲೂ ಈಗ ಬಾಲಿವುಡ್​ನಲ್ಲಿ ಮದುವೆಯ ಸುದ್ದಿ ನಡೆಯುತ್ತಿದೆ. ಈಗಷ್ಟೆ ದೀಪಿಕಾ-ರಣವೀರ್​ ಸಿಂಗ್​ ಮದುವೆಯಾಗಿದ್ದು, ಡಿಸೆಂಬರ್​ 12ಕ್ಕೆ ಪ್ರಿಯಾಂಕಾ-ನಿಕ್​ ವಿವಾಹವಾಗಲಿದ್ದಾರೆ.

ಈ ನಡುವೆ ರಾಕಿ ಸಹ ಮದುವೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ವಿವಾಹದ ಲಗ್ನ ಪತ್ರಿಕೆಯನ್ನು ಪ್ರಕಟಿಸಿದ್ದಾರೆ. ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ ಆವೃತ್ತಿ 8ರಲ್ಲಿ ಭಾಗಿಯಾಗಿದ್ದ ದೀಪಕ್​ ಕಲಾಲ್ ಅವರನ್ನು ರಾಖಿ ವಿವಾಹವಾಗಲಿದ್ದು, ಇಬ್ಬರೂ ತಮ್ಮ ಇನ್​ಸ್ಟಾಗ್ರಾಂನಲ್ಲಿ ಲಗ್ನಪತ್ರಿಕೆಯನ್ನು ಪ್ರಕಟಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ದೀಪಕ್​, ರಾಖಿಗೆ ಪ್ರಪೋಸ್​ ಮಾಡಿದ್ದರಂತೆ. ಅದಕ್ಕೆ ರಾಖಿ ಸಮ್ಮತಿ ಸೂಚಿಸಿದ್ದು ಈಗ ಡಿಸೆಂಬರ್​ನಲ್ಲಿ ವಿವಾಹವಾಗಲಿದ್ದಾರೆ. ಈ ಬಗ್ಗೆ ದೀಪಕ್​ ಸಹ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

​ಡಿಸೆಂಬರ್​ 31ರಂದು ಸಂಜೆ 5.55ಕ್ಕೆ ಲಾಸ್​ ಎಂಜಲೀಸ್​ನಲ್ಲಿ ಇವರ ವಿವಾಹ ನಡೆಯಲಿದ್ದು, ಇದಕ್ಕೆ ಕಿಂಗ್​ ಖಾನ್​ ಶಾರುಖ್ ಹಾಗೂ ಕರಣ್​ ಜೋಹರ್​ ಸಹ ಸಾಕ್ಷಿಯಾಗಲಿದ್ದಾರಂತೆ. ಹೀಗೆಂದು ರಾಖಿ ಇಂಡಿಯನ್​ ಎಕ್ಸ್​ಪ್ರೆಸ್​ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ರಾಖಿ ಖಾಸಗಿ ವಾಹಿನಿಯಲ್ಲಿ ‘ರಾಖಿ ಸ್ವಯಂವರ್​’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅದರಲ್ಲಿ ಈಲೇಶ್​ ಎಂಬ ಉದ್ಯಮಿ ಗೆದ್ದಿದ್ದರು. ಆ ಕಾರ್ಯಕ್ರಮದ ಪ್ರಕಾರ ಈಲೇಶ್​-ರಾಖಿ ಮದುವೆಯಾಗಬೇಕಿತ್ತು. ಕಾರ್ಯಕ್ರಮದ ಅಂತಿಮ ದಿನದಂದು ರಾಖಿ-ಈಲೇಶ್​ ವರಮಾಲೆ ಹಾಗೂ ಉಂಗುರ ಬದಲಾಯಿಸಿಕೊಂಡು, ವಿವಾಹವಾಗುವುದಾಗಿ ಪ್ರಕಟಿಸಿದ್ದರು. ಇದಾದ ನಂತರ ಅವರ ನಡುವೆ ಮನಸ್ತಾಪವಾಗಿ ಇಬ್ಬರೂ ದೂರವಾಗಿದ್ದರು.

ಈಗ ಮತ್ತೆ ರಾಖಿ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈಗ ಮದುವೆ ದಿನಾಂಕ ಸಹ ನಿಗದಿಯಾಗಿದೆ. ಅಲ್ಲದೆ ಮದುವೆ ಗಂಡು ದೀಪಕ್​ ಸಹ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಈ ಬಾರಿಯಾದರೂ ರಾಖಿ ವಿವಾಹ ನಡೆಯಲಿ ಎನ್ನುವುದು ಎಲ್ಲರ ಆಶಯ.

Comments are closed.