ಕ್ರೀಡೆ

ಕ್ರಿಕೆಟ್ ಗೆ ವಿದಾಯ ಘೋಷಿಸಿದ ವೇಗದ ಬೌಲರ್ ಪ್ರವೀಣ್ ಕುಮಾರ್

Pinterest LinkedIn Tumblr

ಮುಂಬೈ: ಭಾರತದ ವೇಗದ ಬೌಲರ್ ಪ್ರವೀಣ್ ಕುಮಾರ್ ಎಲ್ಲಾ ವಿಧದ ವೃತ್ತಿಪರ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಕಳೆದ ಹನ್ನೊಂದು ವರ್ಷಗಳಿಂದ ಕ್ರಿಕೆಟ್ ಆಡುತಿದ್ದ 32 ವರ್ಷದ ಪ್ರವೀಣ್ ಇನ್ನು ಮುಂದೆ ಒಎನ್ಜಿಸಿಗೆ ಕಂಪೆನಿ ಕ್ರಿಕೆಟ್ ನಲ್ಲಿ ಮಾತ್ರ ಭಾಗವಹಿಸುವುದಾಗಿ ಹೇಳಿದ್ದಾರೆ. ಅವರು ಮುಂದೊಂದು ದಿನ ಬೌಲಿಂಗ್ ಕೋಚ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ.

“ನಾನು ಕ್ರಿಕೆಟ್ ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ, ಇದೇನೂ ಆತುರದ ನಿರ್ಧಾರವಲ್ಲ. ಸರಿಯಾಗಿ ಯೋಚಿಸಿಯೇ ನಿರ್ಧರಿಸಿದ್ದೇನೆ.ನಿವೃತ್ತರಾಗಲಿ ಇದು ಸರಿಉಯಾದ ಸಮಯವಾಗಿದೆ.” ಪ್ರವೀಣ್ ಹೇಳಿದ್ದಾರೆ. “ನನ್ನ ಕನಸುಗಳನ್ನು ಪೂರೈಸುವ ಅವಕಾಶವನ್ನು ನೀಡಿದ ನನ್ನ ಕುಟುಂಬಕ್ಕೆ, ಬಿಸಿಸಿಐ, ಯುಪಿಸಿಎ, ರಾಜೀವ್ (ಶುಕ್ಲಾ) ಸರ್ ಅವರಿಗೆ ಧನ್ಯವಾದ ನೀಡಲು ನಾನು ಬಯಸುತ್ತೇನೆ” ಅವರು ಹೇಳಿದ್ದಾರೆ.

ಮೀರತ್ ನಲ್ಲಿ ಜನಿಸಿದ ಪ್ರವೀಣ್ ಅವರು 2007 ರಲ್ಲಿ ಪಾಕಿಸ್ತಾನ ವಿರುದ್ಧದ ಪ್ರಥಮ ಪಂದ್ಯದಿಂದ ಒಟ್ಟು 84 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ.2011 ರಲ್ಲಿ ಭಾರತವು ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಆಡಿದ್ದ ಐತಿಹಾಸಿಕ ಪಂದ್ಯದಲ್ಲಿ ೧೦೬ ರನ್ ಗೆ ೫ ವಿಕೆಟ್ ಪಡೆದು ಸರಣಿ ಜಯಕ್ಕೆ ಕಾರಣರಾಗಿದ್ದರು.

ಒಟ್ಟಾರೆ 25.81 ಸರಾಸರಿಯಲ್ಲಿ 27 ವಿಕೆಟ್ ಪಡೆದಿರುವ ಪ್ರವೀಣ್ ಲಾರ್ಡ್ಸ್ ಕ್ರಿಕೆಟ್ ಮೈದಾನ ಗೌರವ ಮಂಡಳಿಯಲ್ಲಿ ಸ್ಥಾನ ಪಡೆದ ಭಾರತದ ೧೮ನೇ ಆಟಗಾರನಾಗಿದ್ದಾರೆ.

2005-06ರ ರಣಜಿ ಟ್ರೋಫಿವಿಜೇತ ತಂಡದಲ್ಲಿ ಪ್ರವೀಣ್ ಭಾಗವಹಿಸಿದ್ದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 90 ವಿಕೆಟ್ ಗಳನ್ನು ಪಡೆದಿದ್ದರು. ಅಲ್ಲದೆ 2017ರಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್ ನಿಂದ ನಿವೃತ್ತರಾಗುವ ವೇಳೆಗೆ 23.61 ಸರಾಸರಿಯಲ್ಲಿ 267 ವಿಕೆಟ್ ಪಡೆಇದ್ದರು. ಐಪಿಎಲ್ ನಲ್ಲಿ ಗ್ಸ್ ಇಲೆವೆನ್ ಪಂಜಾಬ್, ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿದ್ದ ಪ್ರವೀಣ್ 2010 ರ ಕ್ರೀಡಾಋತುವಿನಲ್ಲಿ ಹ್ಯಾಟ್ರಿಕ್ ಸಾಧಿಸಿದ್ದರು.

Comments are closed.