ಕ್ರೀಡೆ

1000 ಟೆಸ್ಟ್‌: ಇಂಗ್ಲೆಂಡ್‌ಗೆ ಐಸಿಸಿ ಅಭಿನಂದನೆ

Pinterest LinkedIn Tumblr


ದುಬೈ: ಭಾರತದ ವಿರುದ್ಧ 1000 ನೇ ಟೆಸ್ಟ್‌ ಪಂದ್ಯ ಮೂಲಕ ಮೈಲಿಗಲ್ಲು ಸೃಷ್ಠಿಸುತ್ತಿರುವ ಇಂಗ್ಲೆಂಡ್ ತಂಡವನ್ನು ಐಸಿಸಿ ಅಭಿನಂದನೆ ಸಲ್ಲಿಸಿದೆ.

ಈ ಐತಿಹಾಸಿಕ ದಾಖನೆಗೆ ಭಾಜನವಾಗುತ್ತಿರುವ ಇಂಗ್ಲೆಂಡ್ 1877ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಟ್ಟ ಮೊದಲ ಬಾರಿಗೆ ಐದು ದಿನಗಳ ಟೆಸ್ಟ್‌ ಪಂದ್ಯ ಆಡಿತ್ತು. ಇದುವರೆಗೂ ಆಡಿರುವ 999 ಟೆಸ್ಟ್‌ ಪಂದ್ಯಗಳಲ್ಲಿ 357ರಲ್ಲಿ ಜಯ ಸಾಧಿಸಿದ್ದು, 297ರಲ್ಲಿ ಸೋಲು ಕಂಡು ಇನ್ನುಳಿದ 345 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

ನಾಡಿದ್ದು ಆಡುತ್ತಿರುವ ಎಡ್‌ಗ್ಬಾಸ್ಟನ್ ಮೈದಾನ ಒಂದರಲ್ಲೇ 50 ಇಂಗ್ಲೆಂಡ್ ಆಡಿದೆ. ಈ ಅಂಗಳದಲ್ಲಿ ಮೊದಲ ಟೆಸ್ಟ್‌ ಪಂದ್ಯ 1902ರಲ್ಲಿ ಆಸೀಸ್ ವಿರುದ್ಧ ಆಡಿತ್ತು. 27 ಪಂದ್ಯಗಳಲ್ಲಿ ಆಂಗ್ಲರು ಜಯ ಕಂಡರೇ, 8ರಲ್ಲಿ ಸೋತು, 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

999 ಟೆಸ್ಟ್​ ಪಂದ್ಯಗಳನ್ನು ಆಡಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, 812 ಪಂದ್ಯದೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. 535 ಪಂದ್ಯವಾಡಿರುವ ವೆಸ್ಟ್​​ ಇಂಡೀಸ್ ತಂಡ ಮೂರನೇ ಹಾಗೂ 522 ಪಂದ್ಯದೊಂದಿಗೆ ಭಾರತ ನಾಲ್ಕನೇ ಸ್ಥಾನ ಅಲಂಕರಿಸಿದೆ.

Comments are closed.