ಕರಾವಳಿ

ಡ್ಯುಟಿ…ಡ್ಯುಟಿ ಅಂತಾ ಸದಾ ಬ್ಯುಸಿಯಾಗಿರುವ ಕುಂದಾಪುರ ಪೊಲೀಸರು ಕ್ರಿಕೆಟ್ ಆಡಿ ಖುಷಿಪಟ್ಟರು!

Pinterest LinkedIn Tumblr

ಕುಂದಾಪುರ: ನಿತ್ಯ ಖಾಕಿ ಧರಿಸಿ ಕೇಸು, ಕ್ರೈಮು, ಟ್ರಾಫಿಕ್ ಅಂತಾ ಸದಾ ಕರ್ತವ್ಯದಲ್ಲಿ ಬ್ಯುಸಿಯಲ್ಲಿರುತ್ತಿದ್ದ ಪೊಲೀಸರು ಸ್ಪೋರ್ಟ್ಸ್ ಡ್ರೆಸ್ ಹಾಕಿ ಮೈದಾನಕ್ಕಿಳಿದಿದ್ರು. ಟೀಮ್ ರಚಿಸಿಕೊಂಡು ಬ್ಯಾಟ್ ಬಾಲ್ ಹಿಡಿದು ಕ್ರಿಕೆಟ್ ಆಡಿದ್ರು. ವೀಕೇಂಡ್ ಮೂಡಿನಲ್ಲಿ ಕುಂದಾಪುರ ಪೊಲೀಸರ ಕ್ರಿಕೇಟ್ ಆಟದ ಝಲಕ್ ಇಲ್ಲಿದೆ.

ರಾತ್ರಿ ಹಗಲೆನ್ನದೇ ಡ್ಯುಟಿಯಲ್ಲಿ ಬ್ಯುಸಿಯಾಗಿರುತ್ತಿದ್ದ ಕುಂದಾಪುರದ ಪೊಲೀಸರು ಶನಿವಾರ ಬೆಳಿಗ್ಗೆ ಮೈದಾನಕ್ಕಿಳಿದಿದ್ರು. ಆದ್ರೆ ಯಾವುದೇ ಕೇಸು, ಕ್ರೈಮ್, ಬಂದೋಬಸ್ತ್ ಅಂತಲ್ಲ. ಬದಲಾಗಿ ತಂಡಗಳನ್ನು ರಚಿಸಿಕೊಂಡು ಕ್ರಿಕೇಟ್ ಆಟ ಆಡಿದ್ರು. ಕುಂದಾಪುರ ಪೊಲೀಸ್ ಠಾಣೆ, ಕುಂದಾಪುರ ಗ್ರಾಮಾಂತರ ಠಾಣೆ, ಕುಂದಾಪುರ ಟ್ರಾಫಿಕ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೆಳಿಗ್ಗೆ ಠಾಣೆ ಬದಲು ನಗರದ ಗಾಂಧಿಮೈದಾನದಲ್ಲಿ ನೆರೆದಿದ್ರು. ಸ್ಪೋರ್ಟ್ಸ್ ಪ್ಯಾಂಟ್, ಶರ್ಟ್, ಸ್ಪೋರ್ಟ್ಸ್ ಶೂ ಧರಿಸಿ ಅಖಾಡಕ್ಕಿಳಿದ ಪೊಲೀಸರು ಅಕ್ಷರಶ: ಸ್ಪೋರ್ಟ್ಸ್ ಮನ್ ಆಗಿಬಿಟ್ಟಿದ್ರು.

ಕುಂದಾಪುರ ಠಾಣೆಯ ಎರಡು ತಂಡ, ಟ್ರಾಫಿಕ್ ಠಾಣೆಯ ಒಂದು ತಂಡ ಹಾಗೂ ಕುಂದಾಪುರ ಗ್ರಾಮಾಂತರ ಠಾಣೆಯ ಒಂದು ತಂಡ ರಚಿಸಿ ಒಟ್ಟು ನಾಲ್ಕು ತಂಡಗಳಾಗಿ ಮ್ಯಾಚ್ ನಡೆಸಲಾಯ್ತು. ಮೊದಲಿಗೆ ಟ್ರಾಫಿಕ್ ಹಾಗೂ ಕುಂದಾಪುರ ನಗರ ಠಾಣೆಯ ‘ಎ’ ತಂಡದ ನಡುವೆ ಹಣಾಹಣಿ ನಡೆದು ಅದರಲ್ಲಿ ಕುಂದಾಪುರ ಠಾಣೆ ಎ ತಂಡ ಜಯಶಾಲಿಯಾಯ್ತು. ಇನ್ನೊಂದು ಪಂದ್ಯದಲ್ಲಿ ಗ್ರಾಮಾಂತರ ಠಾಣೆ ಹಾಗೂ ಕುಂದಾಪುರ ನಗರ ಠಾಣೆಯ ಬಿ ತಂಡದ ನಡುವಿನ ಪಂದ್ಯದಲ್ಲಿ ಗ್ರಾಮಾಂತರ ಠಾಣೆ ತಂಡ ವಿಜಯಿಯಾಗಿ ಪೈನಲ್ ಪ್ರವೇಶಿಸಿತು. ಪೈನಲ್ ಪಂದ್ಯದಲ್ಲಿ ಕುಂದಾಪುರ ನಗರ ಠಾಣೆ ಎ ತಂಡ ಮತ್ತು ಗ್ರಾಮಾಂತರ ಠಾಣೆಯೊಂದಿಗೆ ಸೆಣೆಸಾಟ ನಡೆದು ಗ್ರಾಮಾಂತರ ಠಾಣೆ ತಂಡವು ವಿಜಯದ ನಗೆ ಬೀರಿತು. ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಫಿಸಿಕಲ್ ಡೈರೆಕ್ಟರ್ ಶಂಕರನಾರಾಯಣ ರೆಫ್ರಿ ಆಗಿದ್ರು.

ಕುಂದಾಪುರ ನಗರ ಠಾಣೆಯ ಒಂದು ತಂಡದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಆಟವಾಡಿದ್ರೆ ಇನ್ನೊಂದು ತಂಡದಲ್ಲಿ ಕುಂದಾಪುರ ಎಸ್ಐ ಹರೀಶ್ ಆರ್. ನಾಯ್ಕ್ ಆಡಿದ್ರು. ಗ್ರಾಮಾಂತರ ಠಾಣೆ ಮುಂದಾಳತ್ವವನ್ನು ಆ ಠಾಣೆಯ ಎಸ್ಐ ಶ್ರೀಧರ್ ನಾಯ್ಕ್ ವಹಿಸಿದ್ರು. ಸ್ವತಃ ಬೋಲಿಂಗ್ ಹಾಗೂ ಬ್ಯಾಂಟಿಂಗ್ ಮಾಡುವ ಮೂಲಕ ಡಿವೈಎಸ್ಪಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು. ಒಂದು ತಂಡದವರು ಆಡುವಾಗ ಗ್ಯಾಲರಿಯಲ್ಲಿ ಕುಳಿತ ಇತರೆ ಪೊಲೀಸರು ಅವರನ್ನು ಹುರಿದುಂಬಿಸುವುದು ಕೂಡ ಕಂಡುಬಂತು. ನಿತ್ಯ ಲಾಟಿ, ಗನ್ನು, ಪೆನ್ನು ಹಿಡಿದು ಹೊರಪ್ರಪಂಚ ಹಾಗೂ ಆಟೋಟದಲ್ಲಿ ತೊಡಗಿಸಿಕೊಳ್ಳಲಾಗದ ಪೊಲೀಸರು ಒಂದಷ್ಟು ವಾರ್ಮ್ ಅಪ್ ಆದ್ರು.

ಕರ್ತವ್ಯವನ್ನು ಶಿಸ್ತು ಬದ್ಧವಾಗಿ ಸಮಯಪ್ರಜ್ನೆಯಿಂದ ಮಾಡಲು ಪೊಲೀಸರು ಒಂದಷ್ಟು ರಿಲೀಫ್ ಆಗಿರಬೇಕೆಂಬ ನಿಟ್ಟಿನಲ್ಲಿ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಅವರ ಆಶಯದಂತೆ ಈ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಇನ್ನು ಸದಾ ಕೆಲಸದಲ್ಲಿರೋ ಪೊಲೀಸರು ಕುಟುಂಬ ಹಾಗೂ ಮಕ್ಕಳ ಜೊತೆ ಹೆಚ್ಚು ಕಾಲ ಇರಲಾಗಲ ಎನ್ನುವ ನಿಟ್ಟಿನಲಲ್ಲಿ ಭಾನುವಾರದಂದು ಪೊಲೀಸರ ಕುಟುಂಬದ ಜೊತೆ ಸಂತೋಷ ಕೂಟ ಆಯೋಜಿಸಲಾಗಿದ್ದು ಅಲ್ಲಿಯೇ ಬಹುಮಾನ ವಿತರಣೆಯೂ ನಡೆಯುತ್ತೆ. ಗ್ರಾಮಾಂತರಠಾಣೆ ತಂಡ ಈ ಸಲ ಕಪ್ ನಮ್ದೆ ಎಂದು ಖುಶಿಪಟ್ಟಿದ್ದು ಕಂಡುಬಂದಿತ್ತು.

ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆ, ಟ್ರಾಫಿಕ್ ಜಂಜಾಟ ಅಂತಾ ಸದಾ ಜನರ ಒಳಿತಿಗೆ ಕೆಲಸ ಮಾಡುವ ಪೊಲೀಸರು ತಮಗೂ ಒಂದಷ್ಟು ರಿಲೀಪ್ ಬೇಕೆಂಬ ನಿಟ್ಟಿನಲ್ಲಿ ಈ ಗೇಮ್ಸ್ ಫ್ಲ್ಯಾನ್ ಮಾಡಿದ್ದು ಇದಕ್ಕೆ ಅಧಿಕಾರಿಗಳು ಸಪೋರ್ಟ್ ಮಾಡಿದ್ರು. ಇದು ಎಲ್ಲಾ ಜಿಲ್ಲೆಯ ಠಾಣೆಗೂ ಮಾದರಿಯಾಗಲಿ ಎಂಬುದು ನಮ್ಮ ಆಶಯ.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Comments are closed.