ಕ್ರೀಡೆ

2018ರ ಏಷ್ಯಾಕಪ್​ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟ: ಭಾರತ ಪಾಕಿಸ್ತಾನ ಮುಖಾಮುಖಿ!

Pinterest LinkedIn Tumblr


ದೆಹಲಿ; 2018ರ ಏಷ್ಯಾಕಪ್​ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಸೆಪ್ಟೆಂಬರ್ 15 ರಿಂದ ಪಂದ್ಯಾವಳಿಗಳು ಆರಂಭವಾಗಲಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಏಷ್ಯಾಕಪ್​​ನಲ್ಲಿ ಆಡುವುದು ಖಚಿತವಾಗಿದ್ದು, ಯುಎಇ, ಸಿಂಗಾಪುರ, ಓಮನ್, ನೇಪಾಳ, ಮಲೇಷ್ಯಾ ಹಾಗೂ ಹಾಂಗ್​​ ಕಾಂಗ್ ತಂಡಗಳು ಅರ್ಹತಾ ಪಂದ್ಯದಗಳನ್ನಾಗಿ ಸರಣಿಯಲ್ಲಿ ಜಾಗ ಗಿಟ್ಟಿಸಿಕೊಳ್ಳಲಿದೆ.

ಬದ್ಧವೈರಿಗಳಾದ ಭಾರತದ ಹಾಗೂ ಪಾಕಿಸ್ತಾನ ಸೆಪ್ಟಂಬರ್ 19ರಂದು ಮುಖಾಮುಖಿಯಾಗಲಿದ್ದು, ಒಂದು ವರ್ಷದ ಇತ್ತಂಡಗಳು ಸೆಣಸಲಿವೆ. ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮನೆಮಾಡಿದೆ. . ಈ ಬಾರಿಯ ಏಷ್ಯಾಕಪ್​ನಲ್ಲಿ ತಂಡಗಳನ್ನು ಒಟ್ಟು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿದ್ದು, ಕ್ವಾಲಿಫೈಯರ್​​ನಲ್ಲಿ ಜಯ ಗಳಿಸಿದ ತಂಡ ಈ ಗುಂಪು ಸೇರಲಿದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳಿವೆ.

ಏಷ್ಯಾ ಕಪ್‌ ವೇಳಾ ಪಟ್ಟಿ

ಗ್ರೂಪ್ ಹಂತ:

ಸೆ. 15 – ಬಾಂಗ್ಲಾದೇಶ vs ಶ್ರೀಲಂಕಾ

ಸೆ. 16 – ಪಾಕಿಸ್ತಾನ vs ಕ್ವಾಲಿಫೈಯರ್

ಸೆ. 17 – ಶ್ರೀಲಂಕಾ vs ಅಫ್ಘಾನಿಸ್ತಾನ

ಸೆ. 18 – ಭಾರತ vs ಕ್ವಾಲಿಫೈಯರ್

ಸೆ. 19 – ಭಾರತ vs ಪಾಕಿಸ್ತಾನ

ಸೆ. 20 – ಬಾಂಗ್ಲಾದೇಶ vs ಅಫ್ಘಾನಿಸ್ತಾನ

ಸೂಪರ್ ಫೋರ್:

ಸೆ. 21 – ಗ್ರೂಪ್ ಎ ವಿನ್ನರ್ vs ಗ್ರೂಪ್ ಬಿ ರನ್ನರ್​​​​​ ಅಪ್

ಸೆ. 21 – ಗ್ರೂಪ್ ಬಿ ವಿನ್ನರ್ vs ಗ್ರೂಪ್ ಎ ರನ್ನರ್​​​​​ ಅಪ್

ಸೆ. 23 – ಗ್ರೂಪ್ ಎ ವಿನ್ನರ್ vs ಗ್ರೂಪ್ ಎ ರನ್ನರ್​​​​​ ಅಪ್

ಸೆ. 23 – ಗ್ರೂಪ್ ಬಿ ವಿನ್ನರ್ vs ಗ್ರೂಪ್ ಬಿ ರನ್ನರ್​​​​​ ಅಪ್

ಸೆ. 25 – ಗ್ರೂಪ್ ಎ ವಿನ್ನರ್ vs ಗ್ರೂಪ್ ಬಿ ರನ್ನರ್​​​​​

ಸೆ. 26 – ಗ್ರೂಪ್ ಎ ವಿನ್ನರ್ ಅಪ್ vs ಗ್ರೂಪ್ ಬಿ ರನ್ನರ್​​​​​ ಅಪ್

ಫೈನಲ್:

ಸೆ. 28 – ಫೈನಲ್

Comments are closed.