ಕ್ರೀಡೆ

ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ !

Pinterest LinkedIn Tumblr

ಮುಂಬೈ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ದೈಹಿಕ ಕಿರುಕುಳ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ದೂರು ನೀಡಿದ್ದ ಪತ್ನಿ ಹಸಿನ್ ಜಹಾನ್ ಇದೀಗ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ.

ಅಮ್ಜದ್ ಖಾನ್ ನಿರ್ದೇಶನದ ಫತ್ವಾ ಚಿತ್ರದಲ್ಲಿ ಹಸಿನ್ ಜಹಾನ್ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಹಸಿನ್ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ ವೇಳೆಗೆ ಚಿತ್ರ ಸೆಟ್ಟೇರಲಿದೆ.

ಇನ್ನು ತಮ್ಮ ಬಾಲಿವುಡ್ ಎಂಟ್ರಿ ಕುರಿತಂತೆ ಮಾತನಾಡಿರುವ ಹಸಿನ್ ಜಹಾನ್ ನನಗೋಸ್ಕರ ಮತ್ತು ನನ್ನ ಮಕ್ಕಳಿಗೋಸ್ಕರವಾದರೂ ನಾನು ಏನಾದರು ಕೆಲಸ ಮಾಡಲೇಬೇಕು. ನನಗೆ ಬೇರಿ ದಾರಿ ಇಲ್ಲ. ಪತಿಯ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ನನಗೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ನಾನು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡು ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಗಲಭೆಯ ಹಿನ್ನೆಲೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಅಮ್ಜದ್ ಖಾನ್ ಮುಂದಾಗಿದ್ದಾರೆ. ಸದ್ಯ ಸಿನಿಮಾ ಕುರಿತು ಬಹುತೇಕ ಎಲ್ಲ ಮಾತುಕತೆಗಳು ಅಂತಿಮವಾಗಿದ್ದು ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರ್ದೇಶಕರು ಭಾಗಿಯಾಗಿದ್ದಾರೆ.

Comments are closed.