ಕ್ರೀಡೆ

ಟ್ವಿಟರ್‌ನಲ್ಲಿ ಹಾಸ್ಯಕ್ಕೊಳಗಾದ ಲಿಯೋನೆಲ್‌ ಮೆಸ್ಸಿ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ

Pinterest LinkedIn Tumblr


ಮಾಸ್ಕೊ: ಜಗತ್ತಿನ ಅತ್ಯುತ್ತಮ ಫ‌ುಟ್‌ಬಾಲ್‌ ಆಟಗಾರರಾಗಿರುವ ಆರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಒಂದೇ ದಿನ ತಮ್ಮ ತಂಡ ನಿರ್ಗಮಿಸುವುದರೊಂದಿಗೆ ಮನೆ ಸೇರಿಕೊಂಡಿದ್ದಾರೆ. ಈ ಬೆನ್ನಲ್ಲೇ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಕೆಲವರಂತೂ ಇಬ್ಬರು ದಿಗ್ಗಜ ಆಟಗಾರರನ್ನು ಅಣಕವಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದರಲ್ಲಿ ಕೆಲವು ಸ್ವಾರಸ್ಯಕರವಾದ ಟ್ವೀಟ್‌ಗಳು ಇಲ್ಲಿವೆ…

ರೊನಾಲ್ಡೊ: ಎಷ್ಟು ಹೊತ್ತಿಗೆ ವಿಮಾನ ನಿಲ್ದಾಣಕ್ಕೆ ಹೊರಟಿದ್ದೀರಿ?
ಮೆಸ್ಸಿ: ನನಗೆ ರಾತ್ರಿ 11.40ಕ್ಕೆ ವಿಮಾನವಿದೆ… ನಿಮಗೆ?
ರೊನಾಲ್ಡೊ: ನನಗಿಂತ ನೀವೇ ಪರವಾಗಿಲ್ಲ…
– ಫ‌ರ್ಮಾನ್‌

“ಮೆಸ್ಸಿ ಮತ್ತು ರೊನಾಲ್ಡೊ ಒಂದೇ ದಿನ ವಿಮಾನ ನಿಲ್ದಾಣದಲ್ಲಿ ಭೇಟಿಯಾಗುತ್ತಾರೆ ಎನ್ನುವುದು ಕೊನೆಗೂ ನಿಜವಾಯಿತು’
– ಟ್ರೆಂಡುಲ್ಕರ್‌

ಇಬ್ಬರು ಸ್ಪೈಡರ್‌ ಮ್ಯಾನ್‌ಗಳು ಒಂದೇ ಸಲ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.
– ಜೋಸೆಫ್

ರೊನಾಲ್ಡೊ: ಬ್ರೋ …ನೀವು ವಿಮಾನ ನಿಲ್ದಾಣದಲ್ಲಿ ಇದ್ದೀರಾ?
ಮೆಸ್ಸಿ: ಹೌದು, ಏನಾಯಿತು?
ರೊನಾಲ್ಡೊ: ಹಾಗೆ ನನಗೂ ಒಂದು ಟಿಕೆಟ್‌ ಬುಕ್‌ ಮಾಡಿ…
ಮೆಸ್ಸಿ: ಏನೂ ಚಿಂತಿಸಬೇಡಿ, ಟಿಕೆಟ್‌ ಕಾಯ್ದಿರಿಸಿದ್ದೇನೆ ಬೇಗ ಬನ್ನಿ.
– ಪ್ರಿನ್ಸ್‌

Comments are closed.