ಕ್ರೀಡೆ

ಬಾಲಿವುಡ್ ಹಿಟ್ ಹಾಡಿಗೆ ಗೇಲ್ ಸಕತ್ ಸ್ಟೆಪ್!

Pinterest LinkedIn Tumblr


ಹೊಸದಿಲ್ಲಿ: ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಏನೆೇ ಮಾಡಿದರೂ ಸುದ್ದಿಯಾಗುತ್ತಿದೆ. ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಪಾಲಿಗೆ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ.

ಮೈದಾನದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಗೇಲ್, ಮೈದಾನದ ಹೊರಗೂ ಅಷ್ಟೇ ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದಾರೆ.

ಈ ನಡುವೆ ಬಾಲಿವುಡ್ ಹಾಡೊಂದಕ್ಕೆ ಗೇಲ್ ಸ್ಟೆಪ್ ಹಾಕಿರುವ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿ ಹರಡುತ್ತಿದೆ. ಬಿಗ್ ಬಾಸ್ 11 ಮೂಲಕ ಜನಪ್ರಿಯಯವಾಗಿರುವ ಗಾಯಕಿ ಹಾಗೂ ನೃತ್ಯಗಾರ್ತಿ ಸ್ವಪ್ನ ಚೌಧರಿ ಮರು ಪರಿಚಯಿಸಿದ್ದಾರೆ.

ಇದೊಂದು ಮ್ಯಾಷಪ್‌ ಎಂದು ತಿಳಿಯದ ಬಿಗ್ ಬಾಸ್ 11ರ ಸ್ಪರ್ಧಿ ಸ್ವಪ್ನ ತಾನು ನೃತ್ಯ ಮಾಡಿರುವ ‘ತೇರಿ ಅಂಕಾ ಕಾ ಯೋ ಕಾಜಲ್’ ಹಾಡಿಗೆ ಗೇಲ್ ಕೂಡಾ ಸ್ಟೆಪ್ ಹಾಕಿದ್ದಾರೆಂದು ಅಂದುಕೊಂಡು ಈ ವಿಡಿಯೋವನ್ನು ಶೇರ್ ಮಾಡಿದ್ದರು.

ಆದರೆ ನಿಜ ಸಂಗತಿಯೆಂದರೆ ಬಾಲಿವುಡ್‌ನ ಹಾಟ್ ತಾರೆ ಸನ್ನಿ ಲಿಯೋನ್ ಅಭಿನಯದ ‘ಲೈಲಾ ಮೈ ಲೈಲಾ’ ಹಾಡಿಗೆ ಗೇಲ್ ಸ್ಟೆಪ್ ಹಾಕಿದ್ದರು. ಅಲ್ಲದೆ ಒಂಬತ್ತು ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್‌ ಹಂಚಿಕೊಳ್ಳಲಾಗಿದೆ. ಇದಕ್ಕೀಗ ಮತ್ತೆ ಪ್ರಚಾರ ದೊರಕಿದೆ.

Comments are closed.