ಕ್ರೀಡೆ

ವೈರಲ್ ಆಗುತ್ತಿದೆ ಧೋನಿ, ಕೊಹ್ಲಿ ಅಪ್ಪುಗೆಯ ಫೋಟೋ !

Pinterest LinkedIn Tumblr

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬೆಂಗಳೂರು ಎರಡು ತಂಡಗಳ ನಾಯಕರಾಗಿರುವ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿಯ ಅಪ್ಪುಗೆಯ ಫೋಟೋ ಗೆ ಸಾಮಾಜಿಕ ಜಾಲತಾಣದಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸಿ ಮರುಟ್ವೀಟ್ ಮಾಡುತ್ತಿದ್ದಾರೆ.

ಚಿನ್ನಸ್ವಾಮಿಯಲ್ಲಿ ನಡೆದ ಬುಧವಾರ ನಡೆದ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದ್ದವು. ಐಪಿಎಲ್ ಆವೃತ್ತಿಯಲ್ಲಿ ಹೈವೋಲ್ಟೇಜ್ ಪಂದ್ಯವೆಂದು ಕರೆಯಲಾಗಿದ್ದ ಈ ಪಂದ್ಯದಲ್ಲಿ ಚೆನ್ನೈ ರೋಚಕ ಗೆಲವು ಪಡೆಯಿತು. ಈ ಪಂದ್ಯಕ್ಕೂ ಮುನ್ನ ಪ್ರಾಕ್ಟಿಸ್ ವೇಳೆ ಕೊಹ್ಲಿ ಮತ್ತು ಧೋನಿ ಅಪ್ಪಿಕೊಂಡಿರುವ ಫೋಟೋ ಈಗ ಎಲ್ಲರ ಗಮನ ಸೆಳೆದಿದೆ.

ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ಧೋನಿ ಅವರು ಸಿಕ್ಸರ್ ಸಿಡಿಸುವುದು ನೋಡುವುದು ಇಷ್ಟ. ಆದರೆ ಅದು ನಮ್ಮ ತಂಡದ ವಿರುದ್ಧ ಅಲ್ಲ. ಟೂರ್ನಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದನ್ನು ನೋಡಲು ಸಂತೋಷವಾಗುತ್ತದೆ. ಧೋನಿ ಅವರು ಬ್ಯಾಟಿಂಗ್ ಮಾಡುವುದನ್ನು ನಾನು ಆನಂದಿಸುತ್ತೇನೆ ಎಂದು ಹೇಳಿದ್ದಾರೆ.

Comments are closed.