ಕ್ರೀಡೆ

2019ರ ವಿಶ್ವಕಪ್’ನಲ್ಲಿ ಟೀಂ ಇಂಡಿಯಾಗೆ ಆರಂಭಿಕ ಎದುರಾಳಿ ಯಾರು ಗೊತ್ತೇ…?

Pinterest LinkedIn Tumblr

ಕೋಲ್ಕತ್ತ: 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಜೂನ್‌ 16ರಂದು ಪಾಕಿಸ್ತಾನದ ವಿರುದ್ಧ ಪಂದ್ಯ ನಿಗದಿಯಾಗಿರುವುದಾಗಿ ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಮೇ 30ರಿಂದ ಜುಲೈ‌14ರ ವರೆಗೂ ವಿಶ್ವಕಪ್‌ ಏಕದಿನ ಟೂರ್ನಿ ಹಣಾಹಣಿ ನಡೆಯಲಿದೆ. ಜೂನ್‌ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮೊದಲ ಪಂದ್ಯ ಆಡಲಿದೆ. ಲೋಧಾ ಸಮಿತಿ ಶಿಫಾರಸಿನಂತೆ ಐಪಿಎಲ್‌ ಫೈನಲ್‌ ಪಂದ್ಯಕ್ಕೂ ವಿಶ್ವಕಪ್‌ ಟೂರ್ನಿಯ ಪಂದ್ಯಕ್ಕೂ 15 ದಿನಗಳ ಅಂತರವನ್ನು ಬಿಸಿಸಿಐ ಕಾಯ್ದುಕೊಳ್ಳಬೇಕಿದೆ.

ಮಂಗಳವಾರ ನಡೆದ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ಸಂಬಂಧ ಚರ್ಚಿಸಲಾಗಿದೆ.

ಮಾರ್ಚ್‌ 29 ರಿಂದ ಮೇ 19ರವರೆಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 12ನೇ ಆವೃತ್ತಿಯ ಟೂರ್ನಿ ನಡೆಯಲಿದೆ. ಇದು ಮುಗಿದ ನಂತರ ಭಾರತದ ಆಟಗಾರರು ಇಂಗ್ಲೆಂಡ್‌ಗೆ ಹೋಗಲಿದ್ದಾರೆ.

ಜೂನ್‌ 16 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ತನ್ನ ಎರಡನೇ ಪೈಪೋಟಿಯಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಸೆಣಸಲಿದೆ.

ಭಾರತ ತಂಡ 2019ರಿಂದ 2023ರ ಅವಧಿಯಲ್ಲಿ ವರ್ಷಕ್ಕೆ ಗರಿಷ್ಠ 309 ದಿನಗಳ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಲಿದೆ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಗವಾಗಿ ತವರಿನಲ್ಲಿ 19 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

Comments are closed.