ಕ್ರೀಡೆ

ಗೇಲ್-ರಾಹುಲ್ ಅಬ್ಬರದಾಟ; ಕೆಕೆಆರ್ ವಿರುದ್ಧ ಕಿಂಗ್ಸ್​ ಇಲೆವೆನ್​ ​ಗೆ 9 ವಿಕೆಟ್ ಗಳ ಭರ್ಜರಿ ಜಯ

Pinterest LinkedIn Tumblr

ಕೋಲ್ಕತಾ: ಹೊಡಿಬಡಿ ದಾಂಡಿಗ ಕ್ರಿಸ್​ ಗೇಲ್​ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​, ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ, ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 191 ರನ್​ ಗಳಿಸಿತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ಥ್​ ಲೂಯಿಸ್​ ನಿಯಮದ ಪ್ರಕಾರ ಪಂಜಾಬ್​ ತಂಡಕ್ಕೆ 13 ಓವರ್​ಗಳಲ್ಲಿ 125 ಓವರ್​ ಗಳಿಸುವ ಗುರಿ ನಿಗದಿಪಡಿಸಲಾಗಿತ್ತು.

125 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ, ಆರಂಭಿಕ ಆಟಗಾರ ಕೆ.ಎಲ್ ರಾಹುಲ್(60) ಮತ್ತು ಕ್ರಿಸ್ ಗೇಲ್(62) ಅರ್ಧ ಶತಕಗಳ ನೆರವಿನಿಂದ ಇನ್ನು 11 ಎಸೆತಗಳು ಬಾಕಿ ಇರುವಂತೆಯೇ ಗೆಲುವು ದಾಖಲಿಸಿತು.

ಕೋಲ್ಕತಾ ಪರ ಕ್ರಿಸ್​ ಲ್ಯಾನ್​ (74) ಆಕರ್ಷಕ ಅರ್ಧ ಶತಕ ಗಳಿಸಿದರೆ, ನಾಯಕ ದಿನೇಶ್​ ಕಾರ್ತಿಕ್​ (43) ಮತ್ತು ರಾಬಿನ್​ ಉತ್ತಪ್ಪ (34) ರನ್​ ಗಳಿಸಿದರು.

Comments are closed.