ಕ್ರೀಡೆ

ಗುಡುಗಿದ ಎಬಿಡಿ; ಡೆಲ್ಲಿ ವಿರುದ್ಧ ಆರ್ ಸಿಬಿಗೆ 6 ವಿಕೆಟ್ ಜಯ

Pinterest LinkedIn Tumblr

ಬೆಂಗಳೂರು: ಎಬಿಡಿ ವಿಲಿಯರ್ಸ್ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್ ಸಿಬಿ) ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ಆರು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಡೇರ್​ಡೆವಿಲ್ಸ್​, ನಿಗದಿತ 20 ಓವರ್ ಗಳಲ್ಲಿ 174 ರನ್ ಸೇರಿಸಿತು.

ಗೆಲುವಿಗೆ 175 ರನ್ ​ಗಳ ಗುರಿ ಬೆನ್ನು ಹತ್ತಿದ ರಾಯಲ್​ ಚಾಲೆಂಜರ್ಸ್​ ತಂಡ ಡಿವಿಲಿಯರ್ಸ್​ ಬಾರಿಸಿದ ಬಿರುಸಿನ ಅರ್ಧ ಶತಕ(90) ನೆರವಿನೊಂದಿಗೆ ಇನ್ನೂ ಎರಡು ಓವರ್​ಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿತು.

ರಾಯಲ್ ಚಾಲೆಂಜರ್ಸ್ ಆರಂಭದಲ್ಲಿ ಮುಗ್ಗರಿಸಿದರೂ ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್​ ಜೋಡಿ ಎಚ್ಚರಿಕೆಯಿಂದ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು. ಇದರೊಂದಿಗೆ ಸತತ ಸೋಲುಗಳ ಬಳಿಕ ಆರ್ ಸಿಬಿ ಗೆಲುವಿನ ಹಾದಿಗೆ ಮರಳಿದೆ.

ಮೊದಲು ಬ್ಯಾಟಿಂಗ್​ ಮಾಡಿದ್ದ ಡೆಲ್ಲಿ ಸಹ, ಆರಂಭಿಕರಾದ ಜಾಸನ್ ರಾಯ್​ ಮತ್ತು ಗೌತಮ್ ಗಂಭೀರ್​ ಅವರ ವಿಕೆಟ್​ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತ್ತು. ಆದರೆ, ನಂತರ ಬಂದ ಶ್ರೇಯಸ್ ಅಯ್ಯರ್ 52(31)​ ಮತ್ತು ಆರ್​ ಆರ್​ ಪಂಥ್ 85 (48) ಅದ್ಭುತ ಇನ್ನಿಂಗ್ಸ್​ ಕಟ್ಟಿದರು. ಅಂತಿಮವಾಗಿ 20 ಓವರ್​ಗಳಲ್ಲಿ ಐದು ವಿಕೆಟ್​ಗಳ ನಷ್ಟದೊಂದಿಗೆ ತಂಡ 174ರನ್​ಗಳ ಸವಾಲಿನ ಮೊತ್ತವನ್ನು ದಾಖಲಿಸಿತ್ತು.

Comments are closed.