ಕ್ರೀಡೆ

ಸಂಜು ಸ್ಯಾಮ್ಸನ್ ಅಮೋಘ ಆಟ; ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್​ಸಿಬಿಗೆ ಸೋಲು: 19 ರನ್ ಗಳ ಜಯ ದಾಖಲಿಸಿದ ರಹಾನೆ ಪಡೆ

Pinterest LinkedIn Tumblr

ಬೆಂಗಳೂರು: ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿಯೇ ಗೆಲ್ಲುವ ಮೂಲಕ ಜಯದ ಖಾತೆ ತೆರೆದಿದ್ದ ಆರ್​ಸಿಬಿ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಿರಾಸೆ ಅನುಭವಿಸಿದೆ.

ರವಿವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ರಹಾನೆ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 19 ರನ್​ಗಳಿಂದ ಸೋಲನುಭವಿಸಿದೆ.

ರಾಜಸ್ಥಾನ ರಾಯಲ್ಸ್​ ನೀಡಿದ್ದ 218 ರನ್​ಗಳ ಬೃಹತ್​ ಗುರಿಯನ್ನು ಬೆನ್ನು ಹತ್ತಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 198 ರನ್​ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ತಂಡದ ನಾಯಕ ವಿರಾಟ್​ ಕೊಹ್ಲಿ (57 ರನ್) ಭರ್ಜರಿ ಅರ್ಧ ಶತಕ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಡಿಕಾಕ್​ (26 ರನ್) ಮತ್ತು ಡಿವಿಲಿಯರ್ಸ್​ (20 ರನ್) ಬೇಗನೇ ನಿರ್ಗಮಿಸು ಮೂಲ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಇನಿಂಗ್ಸ್​ ಕೊನೆಯಲ್ಲಿ ಮನದೀಪ್​ ಸಿಂಗ್​ (47 ಅಜೇಯ) ಮತ್ತು ವಾಷಿಂಗ್ಟನ್​ ಸುಂದರ್​ (35 ರನ್) ಆಕರ್ಷಕ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸಿದರಾದರೂ, ಗೆಲುವು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಆರ್ ಸಿಬಿ 19 ರನ್ ಗಳ ಅಂತರದಲ್ಲಿ ಮುಖಭಂಗ ಅನುಭವಿಸಿತು. ರಾಜಸ್ಥಾನ ರಾಯಲ್ಸ್​ ಪರ ಕನ್ನಡಿಗ ಶ್ರೇಯಸ್​ ಗೋಪಾಲ್​ ಆಕರ್ಷಕ ಬೌಲಿಂಗ್​ ದಾಳಿ ನಡೆಸಿ 22 ರನ್​ ನೀಡಿ 2 ವಿಕೆಟ್​ ಪಡೆದರು.

ಇದಕ್ಕೂ ಮೊದಲು ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ ರಾಯ್ಸ್​ ತಂಡ ಸಂಜು ಸ್ಯಾಮ್ಸನ್​ (92 ರನ್) ಗಳಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 217 ರನ್​ ಗಳಿಸಿತು. ರಾಯಲ್ಸ್​ ಪರ ನಾಯಕ ಅಜಿಂಕ್ಯ ರಹಾನೆ(36 ರನ್), ಬೆನ್​ ಸ್ಟೋಕ್ಸ್​ (27 ರನ್) ಮತ್ತು ಬಟ್ಲರ್​ (23 ರನ್) ರನ್​ ಗಳಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.

Comments are closed.