ಗಲ್ಫ್

ಕರ್ನಾಟಕ ಅನಿವಾಸಿ ಭಾರತೀಯರ ಎನ್.ಆರ್.ಕೆ. ಕಾರ್ಡ್ ನೋಂದಣಿ ಅಭಿಯಾನಕ್ಕೆ ಯುಎಇಯಲ್ಲಿ ಪ್ರವೀಣ್ ಶೆಟ್ಟಿಯಿಂದ ಚಾಲನೆ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ಕರ್ನಾಟಕದವರು ಸ್ಥಾಪಿಸಿರುವ ಕರ್ನಾಟಕ ಪರ ಭಾಷೆ, ಜಾತಿ ಸಮುದಯದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪ್ರಥಮ ಸಭೆಯನ್ನು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಆಶ್ರಯದಲ್ಲಿ 2018 ಏಪ್ರಿಲ್ 14ನೇ ತಾರೀಕು ಸಂಜೆ ದುಬಾಯಿ ಯಲ್ಲಿರುವ ಫಾರ್ಚೂನ್ ಫ್ಲಾಜಾ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಳೆದ ಒಂದು ವರ್ಷಗಳ ಹಿಂದೆ ಕರ್ನಾಟಕ ಅನಿವಾಸಿ ಭಾರತೀಯ ಸಮಿಯ ಆಶ್ರಯದಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಯ ಅಧ್ಯಕ್ಷರಾಗಿರುವ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಭಾಕರ ಅಂಬಲ್ತೆರೆಯವರು ಸ್ವಾಗತಿಸಿದರು. ಇಂಡಿಯನ್ ಕಮ್ಯೂನಿಟಿ ವೆಲ್ಫೆರ್ ಫಂಡ್‍ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಶ್ರೀ ಮೋಹನ್‍ರವರು ಭಾರತೀಯ ದೂತವಾಸ ಕಛೇರಿಯಲ್ಲಿ ಭಾರತೀಯರಿಗೆ ಸಿಗುವ ಸವಲತ್ತು ಮತ್ತು ಇನ್ನಿತರ ಸಮಸ್ಯೆಗಳಿಗೆ ಸ್ಪಂದಿಸಲಾಗುವ ಪರಿಹಾರಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು.

ಕರ್ನಾಟಕ ಸರ್ಕಾರದಲ್ಲಿ ಕಾರ್ಯಾರಂಭ ಮಾಡಿರುವ ಅನಿವಾಸಿ ಭಾರತೀಯ ಸಮಿತಿಯ ಆಶ್ರಯದಲ್ಲಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿದೆ. 2017 ಏಪ್ರಿಲ್ 28ನೇ ತಾರೀಕಿನಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಘಟಕವನ್ನು, ಕರ್ನಾಟಕ ಸರ್ಕಾರದ ಘನವೆತ್ತ ಮುಖ್ಯಮಂತ್ರಿ ಮಾನ್ಯಶ್ರೀ ಸಿದ್ದರಾಮಯ್ಯನವರು, ದುಬಾಯಿಯಲ್ಲಿರುವ ಭಾರತೀಯ ದೂತವಾಸ ಸಭಾಂಗಣದಲ್ಲಿಉದ್ಘಾಟಿಸಿ ಅಧಿಕೃತ ಚಾಲನೆ ನೀಡಿದ್ದರು.

ಸಭೆಯಲ್ಲಿ ಕೆ.ಎನ್.ಆರ್.ಐ. ಯು.ಎ.ಇ. ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರು ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಯ ನೋಂದಣಿ, ನಂತರದ ಅನುಮತಿ, ಎಲ್ಲಾ ಯೋಜನೆಗಳನ್ನು ಪೂರ್ಣ ಗೊಳಿಸಿ, ಅನಿವಾಸಿ ಕನ್ನಡಿಗರಿಗೆ ನೋಂದಣಿ ಮತ್ತು ವಿಶೇಷ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯನ್ನು ಜಾರಿ ಗೊಳಿಸಿದ ಬಗ್ಗೆ ಮಾಹಿತಿ, ಕಾನೂನು ನಿಯಮಗಳ ಬಗ್ಗೆ ಪೂರ್ಣವಾಗಿ ದಾಖಲೆ ಸಹಿತ ಮನವರಿಕೆ ಮಾಡಿಕೊಟ್ಟರು.

ಪ್ರಧಾನಕಾರ್ಯದರ್ಶಿ ಶ್ರೀ ಪ್ರಭಾಕರ ಅಂಬಲ್ತೆರೆ ಅವರು ಕರ್ನಾಟಕ ಸರ್ಕಾರದಿಂದ ಗುರುತಿನ ಚೀಟಿ ಪಡೆದ ಅನಿವಾಸಿ ಕನ್ನಡಿಗರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
1. ಇನ್ಸೂರೆನ್ಸ್ ಸೌಲಭ್ಯ
2. ಜಿಲ್ಲೆಯಲ್ಲಿ ಜಿಲಾಧಿಕಾರಿ ಅಥವಾ ಇನ್ನಿತರ ಕಛೇರಿಗಳಲ್ಲಿ ಶೀಘ್ರವಾಗಿ ಸರ್ಕಾರಿ ಕೆಲಸಗಳನ್ನು ಮಾಡಿಕೊಳ್ಳ ಬಹುದಾಗಿದೆ.
3. ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವ ಸೌಲಭ್ಯ ಮತ್ತು ಕಡಿಮೆ ದರದಲ್ಲಿ ಹಣ ವರ್ಗಾವಣೆ ಮಾಡುವ ಅವಕಾಶ.
4. ರಜೆಯಲ್ಲಿ ತಾಯಿನಾಡಿಗೆ ಬಂದಿರುವ ಸಂದರ್ಭದಲ್ಲಿ ಅಪಘಾತದಿಂದ ಮರಣ, ಅನೀರಿಕ್ಷಿತ ಸಾವು ಸಂಭವಿಸಿದರೆ, ಮನೆಯವರಿಗೆ 2 ಲಕ್ಷದವರೆಗೆ ಪರಿಹಾರ.
5. ಕರ್ನಾಟಕದಲ್ಲಿ ಉದ್ದಿಮೆ ಸ್ಥಾಪಿಸಲು ಸರ್ಕಾರದಿಂದ ಸಹಾಯ.
6. ವಿದೇಶದಲ್ಲಿ ಕೆಲಸ ಕಳೆದುಕೊಂಡು ತಾಯಿನಾಡಿಗೆ ಬಂದವರಿಗೆ ತರಭೇತಿ ಮತ್ತು ಕಾರ್ಯಗಾರ ಸ್ಥಾಪಿಸಲು ಪುನರ್ ವ್ಯವಸ್ಥೆ ಕಲ್ಪಿಸಲಾಗುವುದು.
7. ಆಸ್ಪತ್ರೆಗಳಲ್ಲಿ ಎನ್.ಆರ್.ಕೆ. ಕಾರ್ಡ್ ದಾರರಿಗೆ ಡಿಸ್ಕೌಂಟ್ ಸೌಲಭ್ಯ.
8. ಊರಿನಲ್ಲಿ ಸಮಾಜ ಸೇವೆ ಮಾಡುವವರಿಗೆ ತೆರಿಗೆ ರಿಯಾಯ್ತಿ
8. ಪ್ರವಾಸಿ ತಾಣಗಳಲ್ಲಿರುವ ಹೋಟೆಲ್ ಗಳಲ್ಲಿ ಕಡಿಮೆ ದರದ ಸೌಲಭ್ಯ

ಸಹಕಾರ್ಯದರ್ಶಿ ಶ್ರೀ ದೀಪಕ್ ಸೋಮಶೇಖರ್ ರವರು ಎನ್.ಆರ್.ಕೆ. ಕಾರ್ಡ್ ಕರ್ನಾಟಕ ಸರ್ಕಾರದಿಂದ ಉಚಿತವಾಗಿ ಪಡೆಯಲು ಆನ್ ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಭರ್ತಿ ಮಾಡುವ ಬಗ್ಗೆ

1. ಯು.ಎ.ಇ.ಯಲ್ಲಿ ನೂತನವಾಗಿ ಕೆಲಸಕ್ಕೆ ಸೇರಿರುವ ಕರ್ನಾಟಕದವರು ವಿಸಾ ಪುಟದಲ್ಲಿ ದಾಖಲೆ 6 ತಿಂಗಳು ಕಳೆದಿರಬೇಕು
2. ಪಾಸ್ಪೋರ್ಟ್ ಸೈಜಿನ ಫೊಟೋ ಡಿಜಿಟಲ್ ಪೈಲ್ ಅಪ್ಲೋಡ್ ಮಾಡಬೇಕು.
3. ಯು.ಎ.ಇ. ವಿಸಾ ದಾಖಲೆ ಇರುವ ಪಾಸ್ಪೋರ್ಟ್ ನಲ್ಲಿ ಭಾರತದ ವಿಳಾಸವಿರುವ ಡಿಜಿಟಲ್ ಪೈಲ್ ಅಪ್ಲೊಡ್ ಮಾಡಬೇಕು.

ನೋಂದಣಿ ಪ್ರಕ್ರಿಯೆ ಮುಗಿದನಂತರ ತಮ್ಮ ದಾಖಲಾತಿಯ ಬಗ್ಗೆ ತಮ್ಮ ಇ-ಮೆಯಿಲ್ ನಲ್ಲಿ ದಾಖಲೆಯಾಗಿರುವ ಬಗ್ಗೆ ಮಾಹಿತಿ ದೊರೆತು ನಂತರ ಕೆಲವು ದಿನಗಳಲ್ಲಿ ತಮ್ಮ ಎನ್. ಆರ್. ಕೆ. ಕಾರ್ಡ್ ದೊರೆಯುವ ಬಗ್ಗೆ ಪೂರ್ಣ ಮಾಹಿತಿ ನೀಡಿದರು.

ನಂತರ ಪ್ರೇಕ್ಷಕರ ನಡುವೆ ನೇರ ಸಂವಾದ ನಡೆಸಿ ಕೇಳುಗರ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಲಾಯಿತು. ಕೆ.ಎನ್.ಆರ್.ಐ. ಉಪಾಧ್ಯಕ್ಷರುಗಳಾದ ಶ್ರೀ ಹರೀಶ್ ಶೇರಿಗಾರ್, ಡಾ| ಕಾಪು ಮಹಮ್ಮದ್, ಖಜಾಂಚಿ ಶ್ರೀ ಸದನ್ ದಾಸ್, ಸಹಕಾರ್ಯದರ್ಶಿ ಶ್ರೀ ನೋವೆಲ್ ಅಲ್ಮೆಡಾ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು

ಸಹಕಾರ್ಯದರ್ಶಿ ಶ್ರೀ ಎಂ. ಇ. ಮೂಳೂರ್ ರವರು ವಂದನಾರ್ಪಣೆ ಮಾಡಿದರು.

ಯು.ಎ.ಇ. ಯಲ್ಲಿರುವ ಸುಮಾರು ತೊಂಬತ್ತರಿಂದ ನೂರರ ಸಂಖ್ಯೆಯಲ್ಲಿರುವ ವಿವಿಧ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಸಂಘಟನೆಯ ಸದಸ್ಯರುಗಳನ್ನು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಸರ್ಕಾರದಲ್ಲಿ ನೋಂದಣಿ ಗೊಳಿಸುವ ಜವಬ್ಧಾರಿಯನ್ನು ತೆಗೆದುಕೊಳ್ಳುವ ಪೂರ್ಣ ಭರವಸೆಯನ್ನು ಸಭೆಯಲ್ಲಿ ಸಭೆಯಲ್ಲಿ ನೀಡಿದರು.

ಕೆ.ಎನ್.ಆರ್.ಐ. ಉಪಾಧ್ಯಕ್ಷರಾಗಿರುವ ಶ್ರೀ ಬಿ. ಕೆ. ಗಣೇಶ್ ರೈಯವರು ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡುತ್ತಾ ಕಾರ್ಯಕ್ರಮ ನಿರೂಪಣೆಯ ಜವಬ್ಧಾರಿಯನ್ನು ವಹಿಸಿದ್ದರು. ಕೊನೆಯಲ್ಲಿ ಭೋಜನದೊಂದಿಗೆ ಸಭೆ ಮುಕ್ತಾಯವಾಯಿತು

ವರದಿ : ಬಿ. ಕೆ. ಗಣೇಶ್ ರೈ
ಛಾಯಚಿತ್ರ ಕೃಪೆ : ಕಿರಣ್ ನಿರ್ಕಾನ್

Comments are closed.