ಕ್ರೀಡೆ

ಐಪಿಎಲ್ ವೀಕ್ಷಣೆಗೆ ಅಡ್ಡಿ ಪಡಿಸಿದ ತಾಯಿ: ಮಗ ಆತ್ಮಹತ್ಯೆ

Pinterest LinkedIn Tumblr

ಆಶಿಫ್‌ ರಿಜ್ವಿ

ಐಪಿಎಲ್‌ ಮ್ಯಾಚ್‌ ನೋಡುವ ವಿಷಯದಲ್ಲಿ ತಾಯಿ ಜತೆ ಜಗಳವಾಡಿ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬಯಿಯಲ್ಲಿ ನಡೆದಿದೆ.

18 ವರ್ಷದ ವಿದ್ಯಾರ್ಥಿ ನೀಲೇಶ್ ಗುಪ್ತಾ ಐಪಿಎಲ್ ಮ್ಯಾಚ್‌ ನೋಡ್ತಾ ಇದ್ದ. ಆಗ ತಾಯಿ ಮನೆಯ ಹೊರಗಡೆ ಇಟ್ಟಿರುವ ನೀರಿನ ಟ್ಯಾಂಕ್‌ ತುಂಬಿದೆಯೇ ಎಂದು ನೋಡಿಕೊಂಡು ಬಾ ಅಂತಾರೆ. ಮ್ಯಾಚ್‌ ನೋಡುವುದರಲ್ಲಿ ಮಗ್ನನಾಗಿದ್ದ ನೀಲೇಶ್ ಗುಪ್ತಾ ತಾಯಿಯ ಮಾತನ್ನು ಗಮನಕ್ಕೆ ತೆಗೆದುಕೊಳ್ಳದೆ ಟಿವಿ ನೋಡುತ್ತಾನೆ. ಇವನ ವರ್ತನೆಯಿಂದ ಸಿಟ್ಟಾದ ತಾಯಿ ಟಿವಿ ಸ್ವಿಚ್‌ ಆಫ್‌ ಮಾಡುವಂತೆ ಹೇಳುತ್ತಾರೆ. ಆಗ ಮಗ-ತಾಯಿ ನಡುವೆ ವಾಗ್ವಾದ ಉಂಟಾಗಿ ತಾಯಿಯೇ ಹೋಗಿ ಟಿವಿ ಆಫ್‌ ಮಾಡಿ ತಾನೇ ನೀರಿನ ಟ್ಯಾಂಕ್‌ ಬಳಿ ಹೋಗುತ್ತಾಳೆ.

15 ನಿಮಿಷದ ಬಳಿಕ ಹಿಂತಿರುಗಿ ಬಂದಾಗ ಮನೆಯ ಮುಂಬಾಗಿಲು ಲಾಕ್‌ ಆಗಿರುತ್ತದೆ. ಮಗನನ್ನು ಎಷ್ಟೇ ಕರೆದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೋದಾಗ, ಏನೋ ಅಪಾಯದ ಸುಳಿವು ಸಿಕ್ಕಿ ಪಕ್ಕದ ಮನೆಯವರನ್ನು ಕರೆಯುತ್ತಾರೆ. ಅವರೆಲ್ಲಾ ಸೇರಿ ಬಾಗಿಲನ್ನು ಮುರಿದು ಒಳಗೆ ಬಂದು ನೋಡಿದರೆ ಹಾಲ್‌ನ ಫ್ಯಾನ್‌ನಲ್ಲಿ ಈತನ ದೇಹ ನೇತಾಡ್ತಾ ಇತ್ತು.

‘ನೀಲೇಶ್‌ ಕ್ರಿಕೆಟ್ ಅನ್ನು ತುಂಬಾ ಇಷ್ಟ ಪಡುತ್ತಿದ್ದ’ ಎಂದು ತಂದೆ ಅನಿಲ್‌ ಹೇಳಿದ್ದಾರೆ.

Comments are closed.