ಚೆನ್ನೈ: ಗಾಯದ ಸಮಸ್ಯೆಯಿಂದಾಗಿ ಕೇದಾರ್ ಜಾದವ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಿಂದ ಹೊರ ಬಂದಿದ್ದಾರೆ.
ಅಲ್ರೌಂಡರ್ ಕೇದಾರ್ ಜಾದವ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಾದವ್ ಮಂಜಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿದ್ದರು.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೇದಾರ್ ಜಾದವ್ ಟೂರ್ನಿಯಿಂದ ಹೊರ ಹೋಗಿದ್ದಾರೆ. ಇದರಿಂದ ತಂಡಕ್ಕೆ ನಷ್ಟವಾಗಿದೆ. ಜಾದವ್ ಉತ್ತಮ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ಕೋಚ್ ಮೈಕೆಲ್ ಹಸ್ಸಿ ಹೇಳಿದ್ದಾರೆ.
Comments are closed.