ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್ 2018: ಟೆನಿಸ್, ಟೇಬಲ್ ಟೆನಿಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

Pinterest LinkedIn Tumblr

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಇಂದು ಟೆನಿಸ್ ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ಭಾರತ ಗೆದ್ದು ಕೊಂಡಿದೆ.

ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಆಕ್ರಮಣಕಾರಿ ಆಟವಾಡಿ ಮಲೇಷ್ಯಾ ವಿರುದ್ಧ ಜಯಗಳಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕ ಸಂಪಾದಿಸಿಕೊಟ್ಟಿದ್ದಾರೆ.

ಮಿಕ್ಸೆಡ್ ಟೀಂ ಫೈನಲ್ ಪಂದ್ಯದಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ಹಾಗೂ ಹೋರಾಟದ ಆಟವನ್ನು ಪ್ರದರ್ಶಿಸಿ ಮಲೇಷ್ಯಾದ ಸೋನಿಯಾ ಚಯಾ ವಿರುದ್ಧ ಜಯಗಳಿಸಿದರು.

ಮಿಕ್ಸೆಡ್ ಟೀಂ ವಿಭಾಗದಲ್ಲಿ ಭಾರತ-3-1ರ ಅಂತರದಲ್ಲಿ ಜಯ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು.

ಇದೇ ವೇಳೆ ಭಾರತ ತಂಡ ಟೇಬಲ್ ಟೆನಿಸ್ ನಲ್ಲೂ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಪುರುಷದ ಭಾರತ ತಂಡ ನೈಜಿರಿಯಾ ತಂಡವನ್ನು 3-0ಯಿಂದ ಸೋಲಿಸುವ ಮೂಲಕ ಜಯದ ನಗೆ ಬೀರಿದರು.

Comments are closed.