ಕ್ರೀಡೆ

ಕಾಮನ್‍ವೆಲ್ತ್ ಗೇಮ್ಸ್’ನಲ್ಲಿ ಎಲ್ಲರ ಮುಂದೆಯೇ ಗೆಳತಿಗೆ ಪ್ರಪೋಸ್ ಮಾಡಿದ ಬಾಸ್ಕೆಟ್ ಬಾಲ್ ಆಟಗಾರ ! ಮುಂದೇನಾಯಿತು ನೋಡಿ…

Pinterest LinkedIn Tumblr

ಗೋಲ್ಡ್ ಕೋಸ್ಟ್: ಇಂಗ್ಲೆಂಡ್ ಬಾಸ್ಕೆಟ್ ಬಾಲ್ ಆಟಗಾರ ಜಾಮೆಲ್ ಆಂಡರ್ಸನ್ ಭಾನುವಾರ ನಡೆದ ಕಾಮನ್‍ವೆಲ್ತ್ ಗೇಮ್ಸ್ ವೇಳೆ ಬಾಸ್ಕೆಟ್ ಬಾಲ್ ಕೋರ್ಟ್‍ನಲ್ಲೇ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ.

https://youtu.be/odhDkFN-hZg

ಭಾನುವಾರ ನಡೆದ ಪಂದ್ಯದಲ್ಲಿ ಕ್ಯಾಮೇರೋನ್ ವಿರುದ್ಧ ಇಂಗ್ಲೇಡ್ 81-54 ಅಂತರದಲ್ಲಿ ಜಯಗಳಿಸಿತ್ತು. ತಮ್ಮ ಜಯವನ್ನು ಸಂಭ್ರಮಿಸುತ್ತಿರುವಾಗಲೇ ಆಂಡರ್ಸನ್ ತನ್ನ ಟೀಂ ಜೊತೆ ಸೇರಿಕೊಂಡು ತನ್ನ ಪ್ರೇಯಸಿ ಜಾರ್ಜಿಯಾ ಜೋನ್ಸ್ ಗೆ ಸರ್ಪ್ರೈಸ್ ನೀಡಿ ಪ್ರಪೋಸ್ ಮಾಡಿದ್ದಾರೆ.

ಆಂಡರ್ಸನ್ ಸ್ಪೇನ್‍ನ ಪಾಲಿಡೆಪೋರ್ಟಿವೊ ಲಾ ರೊಡಾಗಾಗಿ ಬಾಸ್ಕೆಟ್ ಬಾಲ್ ಆಡುತ್ತಿದ್ದು, ಜೋನ್ಸ್ ಬ್ರಿಟಿಷ್‍ನ ಮ್ಯಾಂಚೆಸ್ಟರ್ ಮಿಸ್ಟಿಕ್ಸ್ ಮಹಿಳಾ ಬಾಸ್ಕೆಟ್ ಬಾಲ್ ಲೀಗ್ ಗಾಗಿ ಆಟವಾಡುತ್ತಾರೆ.

ಆಂಡರ್ಸನ್ ಜಾರ್ಜಿಯಾ ಅವರನ್ನು ಪ್ರಪೋಸ್ ಮಾಡುವ ವಿಡಿಯೋವನ್ನು ಇಂಗ್ಲೆಂಡ್ ತಂಡ ಬಿಡುಗಡೆ ಮಾಡಿದೆ. ಆ ವಿಡಿಯೋದಲ್ಲಿ ಇಂಗ್ಲೆಂಡ್ ತಂಡ ವೃತ್ತಾಕಾರದಲ್ಲಿ ನಿಂತುಕೊಂಡು ತಮ್ಮ ಜಯವನ್ನು ಸಂಭ್ರಮಿಸುತ್ತಿದ್ದರು. ತಕ್ಷಣ ಅವರೆಲ್ಲ ಹಿಂದೆ ಬಂದು ನಿಂತುಕೊಂಡಾಗ ಆಂಡರ್ಸನ್ ಮೊಣಕಾಲೂರಿ ಜಾರ್ಜಿಯಾರಿಗೆ ಪ್ರಮೋಸ್ ಮಾಡಿದ್ದಾರೆ.

ನನ್ನ ತಂಡದ ಸದಸ್ಯರು ಇದರಲ್ಲಿ ಭಾಗಿಯಾಗಿ ಇಷ್ಟು ಅದ್ಭುತ ರೀತಿಯಲ್ಲಿ ಪ್ಲಾನ್ ಮಾಡಿದ್ದರು. ಹಾಗಾಗಿ ಎಲ್ಲವೂ ಸರಿಯಾಗಿ ನೆರವೇರಿತ್ತು. ಈ ವಿಚಾರ ನನ್ನ ಮನಸ್ಸಿನಲ್ಲಿತ್ತು ಹಾಗಾಗಿ ನನಗೆ ಬಾಸ್ಕೆಟ್ ಬಾಲ್ ಆಡಲು ಸುಲಭವಾಯಿತು ಎಂದು ಆಂಡರ್ಸನ್ ತಿಳಿಸಿದ್ದಾರೆ.

ನನಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನನ್ನ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ನನ್ನನ್ನು ಅಲ್ಲಿ ನಿಲ್ಲಿಸಿದ್ದರು. ನಂತರ ಅಲ್ಲಿ ನಡೆದಿದ್ದನು ನೋಡಿ ನನಗೇ ಶಾಕ್ ಆಗಿದೆ ಎಂದು ಜಾರ್ಜಿಯಾ ಹೇಳಿದ್ದಾರೆ. ಈ ಒಂದು ಅವಕಾಶಕ್ಕಾಗಿ ನಾವು ತುಂಬ ಪರಿಶ್ರಮಪಟ್ಟಿದ್ದೇವೆ. ಬಾಸ್ಕೆಟ್ ಬಾಲ್ ನಮ್ಮ ಸಂಬಂಧದ ಒಂದು ಭಾಗವಾಗಿದೆ. ಹಾಗಾಗಿ ನಾನು ಈ ರೀತಿ ಮಾಡಿದೆ ಎಂದು ಆಂಡರ್ಸನ್ ತಿಳಿಸಿದ್ದಾರೆ.

ಕೋರ್ಟ್ ನಲ್ಲಿ ಜಾರ್ಜಿಯಾರನ್ನು ಪ್ರಪೋಸ್ ಮಾಡುವ ಮೊದಲು ಆಂಡರ್ಸನ್, ಜಾರ್ಜಿಯಾ ಅವರ ತಂದೆ ಜೇಫ್ ಹತ್ತಿರ ಆರ್ಶೀವಾದ ಪಡೆದಿದ್ದಾರೆ. ಜೇಫ್ ಇಂಗ್ಲೆಂಡ್ ಅಂತರಾಷ್ಟ್ರೀಯಾ ಹಾಗೂ ಮ್ಯಾಂಚೆಸ್ಟರ್ ಮಿಸ್ಟಿಕ್ಸ್ ನ ಮಾಜಿ ಕೋಚ್ ಆಗಿದ್ದಾರೆ.

Comments are closed.