ಕ್ರೀಡೆ

ಕೊಹ್ಲಿ ಉತ್ತರಾಧಿಕಾರಿ ಬೌಲರ್ ಆಗಿರಬೇಕು: ಸೆಹ್ವಾಗ್

Pinterest LinkedIn Tumblr


ಮೋಹಾಲಿ: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು, ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿಯಾಗಿ ಬೌಲರ್ ಒಬ್ಬರಿಗೆ ಟೀಂ ಇಂಡಿಯಾದ ನಾಯಕತ್ವ ವಹಿಸಬೇಕು ಎಂದು ಹೇಳಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಆವೃತ್ತಿಯಲ್ಲಿ ಪಂಜಾಬ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಪಂದ್ಯ ಇದೇ 8ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನೂತನ ಸಾರಥಿ ಆರ್. ಅಶ್ವಿನ್ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನೆಗೆ, ನಾನು ಅಶ್ವಿನ್ ಅವರೊಂದಿಗೆ ಆಡಿದ್ದೇನೆ. ಅವರ ಆಲೋಚನೆಗಳು ಏನು ಎಂಬುದು ತಿಳಿದಿದೆ ಎಂದು ಚುಟುಕಾಗಿ ಉತ್ತರಿಸಿದರು.

ಅಶ್ವಿನ್ ರನ್ನು ಪಂಜಾಬ್ ತಂಡದ ನಾಯಕನನ್ನಾಗಿ ಮಾಡಿರುವುದು ಉತ್ತಮ ನಿರ್ಧಾರ. ನಾನು ಅವರ ಅಭಿಮಾನಿ. ಕಪಿಲ್ ದೇವ್, ಇಮ್ರಾನ್ ಖಾನ್, ವಾಸೀಂ ಅಕ್ರಂ ಅವರ ನಾಯಕತ್ವ ನೋಡಿದ್ದೇನೆ. ಹಲವು ವರ್ಷಗಳಿಂದ ಯಾವ ಒಬ್ಬ ಬೌಲರ್ ತಂಡದ ನಾಯಕನಾಗಿಲ್ಲ. ಕೊಹ್ಲಿ ನಂತರ ಬೌಲರ್ ಒಬ್ಬರಿಗೆ ನಾಯಕತ್ವ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ತಂಡ ಕಳೆದ ಹತ್ತು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಬಲಿಷ್ಠವಾಗಿದೆ. ಸಿಂಗಲ್ಸ್ ಗಿಂತ ಸಿಕ್ಸರ್ ಬೌಂಡರಿ ಬಾರಿಸುವ ಆಟಗಾರರನ್ನು ತೆಗೆದುಕೊಳ್ಳಲಾಗಿದೆ ಎಂದರು.

Comments are closed.