ಕ್ರೀಡೆ

ಆರ್ ಸಿಬಿ ಪ್ರಾಯೋಕತ್ವವನ್ನು ಪಡೆದ ಡಾಮಿನೋಸ್ ಪಿಜ್ಜಾ !

Pinterest LinkedIn Tumblr

ಬೆಂಗಳೂರು: ಖ್ಯಾತ ಪಿಜ್ಜಾ ತಯಾರಿಕಾ ಸಮೂಹ ಸಂಸ್ಥೆ ಡಾಮಿನೋಸ್ ಆರ್ ಸಿಬಿ ಪ್ರಾಯೋಕತ್ವವನ್ನು ಪಡೆದಿದ್ದು, ಆರ್ ಸಿಬಿ ಆಟಗಾರರ ಸಮವಸ್ತ್ರದಲ್ಲಿ ಡಾಮಿನೋಸ್ ಪಿಜ್ಜಾ ಲೋಗೋ ಸ್ಥಾನ ಪಡೆದಿದೆ.

ಆರ್ ಸಿಬಿಯೊಂದಿಗೆ ಸಹಭಾಗಿತ್ವದ ಕುರಿತು ಡಾಮಿನೋಸ್ ಪಿಜ್ಜಾ ಸಮೂಹ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಡಾಮಿನೋಸ್ ಪಿಜ್ಜಾ ಮಳಿಗೆಗಳಲ್ಲಿ ಆರ್ ಸಿಬಿ ಕುರಿತ ಜಾಹಿರಾತುಗಳು ಮತ್ತು ಆರ್ ಸಿಬಿ ಆಡುವ ಪಂದ್ಯಗಳ ಪ್ರಸಾರ ಮಾಡಲಿದೆ. ಅಂತೆಯೇ ಆರ್ ಸಿಬಿ ಆಟಗಾರರ ಸಮವಸ್ತ್ರದಲ್ಲಿ ಡಾಮಿನೋಸ್ ಪಿಜ್ಜಾ ಲೋಗೋ ಇರಲಿದ್ದು, ಆರ್ ಸಿಬಿ ಆಡುವ ಪಂದ್ಯಗಳ ವೇಳೆಯಲ್ಲಿ ಮೈದಾನದಲ್ಲಿ ಡಾಮಿನೋಸ್ ಲೋಗೋಗಳು ರಾರಾಜಿಸಲಿವೆ. ಅಷ್ಟು ಮಾತ್ರವಲ್ಲದೇ ಆರ್ ಸಿಬಿ ಆಟಗಾರರು ಪಾಲ್ಗೊಳ್ಳಲಿರುವ ಯಾವುದೇ ಪಾರ್ಟಿ ಅಥವಾ ಕಾರ್ಯಕ್ರಮಗಳಲ್ಲೂ ಡಾಮಿನೋಸ್ ಪಿಜ್ಜಾ ಲೋಗೋಗಳ ಪ್ರದರ್ಶನ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಳ್ಳಲಾಗಿದೆ.

ಆ ಮೂಲಕ ಡಾಮಿನೋಸ್ ಪಿಜ್ಜಾ ಸಂಸ್ಥೆ 2018ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರಚಾರ ನಡೆಸಲು ಸಿದ್ಧವಾಗಿದೆ. ಇದಲ್ಲದೇ ಆರ್ ಸಿಬಿ ತಂಡಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಮಾರ್ಕೆಟಿಂಗ್ ಮಾಡುವ ಜವಾಬ್ದಾರಿಯನ್ನೂ ಕೂಡ ಡಾಮಿನೋಸ್ ಸಂಸ್ಥೆ ಪಡೆದುಕೊಂಡಿದೆ. ಹೀಗಾಗಿ ಡಿಜಿಟಲ್ ಆವೃತ್ತಿ ಪ್ರಸಾರ ಮಾಡುವ ಹಾಟ್ ಸ್ಛಾರ್ ನೊಂದಿಗೂ ಡಾಮಿನೋಸ್ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಡಾಮಿನೋಸ್ ಸಂಸ್ಥೆ ಸಿಇಒ ಮಾಹಿತಿ ನೀಡಿದ್ದು, ಆರ್ ಸಿಬಿ ತಂಡದೊಂದಿಗೆ ಸಹಭಾಗಿತ್ವ ಪಡೆದಿರುವುದು ತುಂಬಾ ಸಂತಸದ ಸುದ್ದಿಯಾಗಿದೆ ಎಂದು ಹೇಳಿದ್ದಾರೆ.

Comments are closed.