ಕ್ರೀಡೆ

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಪರ ನಾಲ್ಕನೇ ಚಿನ್ನ ಗೆದ್ದ ರಾಗಲ ವೆಂಕಟ್ ರಾಹುಲ್‌

Pinterest LinkedIn Tumblr

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್ ಲಿಫ್ಟಿಂಗ್ ತಂಡದ ಚಿನ್ನದ ಪದಕ ಬೇಟೆ ಮುಂದುವರೆದಿದ್ದು, ಪುರುಷರ 85 ಕೆಜಿ ವಿಭಾಗದಲ್ಲಿ ಭಾರತದ ರಾಗಲ ವೆಂಕಟ್ ರಾಹುಲ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

85 ಕೆಜಿ ತೂಕದ ವಿಭಾಗದಲ್ಲಿ ರಾಗಲ ವೆಂಕಟ್ ರಾಹುಲ್ ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಎರಡು ಹಂತಗಳ ಸ್ಪರ್ಧೆಯಲ್ಲಿ ಕ್ರಮವಾಗಿ 151 ಕೆಜಿ, 187 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು.

ಇನ್ನು ಭಾರತದ ರಾಗಲ ವೆಂಕಟ್ ರಾಹುಲ್ ಗೆ ಡಾನ್ ಒಪೇಲೋಗ್ ತೀವ್ರ ಪೈಪೋಟಿ ನೀಡಿದರು. ಆದರೆ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಕ್ರೀಡಾಕೂಟದಲ್ಲಿ ಭಾರತ ಇವರೆಗೆ 6 ಪದಗಳನ್ನು ಗೆದ್ದಿದೆ. ಅದರಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಸೇರಿದೆ.

Comments are closed.