ರಾಷ್ಟ್ರೀಯ

ರಕ್ಷಣೆ, ಭದ್ರತೆ, ಸಂಪರ್ಕ, ವ್ಯಾಪಾರ, ಕೃಷಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಒಪ್ಪಂದ; ಮೋದಿ- ನೇಪಾಳ ಪ್ರಧಾನಮಂತ್ರಿ ಒಪ್ಪಂದಕ್ಕೆ ಅಂಕಿತ

Pinterest LinkedIn Tumblr

ನವದೆಹಲಿ: ರಕ್ಷಣೆ ಮತ್ತು ಭದ್ರತೆ, ಸಂಪರ್ಕ, ವ್ಯಾಪಾರ, ಕೃಷಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಭಾರತ ಹಾಗೂ ನೇಪಾಳ ಒಪ್ಪಂದ ಮಾಡಿಕೊಂಡಿವೆ.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಸಂಬಂಧ ಮಾತುಕತೆ ನಡೆಸಿದ ಬಳಿಕ ಪ್ರಧಾನಿ ನರೇಂದ್ರಮೋದಿ ಹಾಗೂ ನೇಪಾಳ ಪ್ರಧಾನಮಂತ್ರಿ ಕೆ ಪಿ ಶರ್ಮಾ ಒಲಿ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ.

ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರಮೋದಿ, ನೇಪಾಳದಲ್ಲಿ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ನೇಪಾಳ ಪ್ರದಾನಿ ಕೆ. ಪಿ. ಶರ್ಮ ಮಾತನಾಡಿ, ಉಭಯ ದೇಶಗಳ ನಡುವೆ ವಿಶ್ವಾಸರ್ಹ ಸಂಬಂಧ ಬೆಳೆಸಲು ನೇಪಾಳ ಸರ್ಕಾರ ಬಯಸುತ್ತದೆ . 21 ನೇ ಶತಮಾನದಲ್ಲಿ ಸಂಬಂಧವನ್ನು ಮತ್ತಷ್ಟು ವೃದ್ದಿಯ ಗುರಿಯೊಂದಿಗೆ ಭಾರತಕ್ಕೆ ಆಗಮಿಸಿರುವುದಾಗಿ ಅವರು ತಿಳಿಸಿದರು.

ಕಠ್ಮಂಡು ಮತ್ತು ಭಾರತ ನಡುವೆ ನೂತನ ರೈಲು ಮಾರ್ಗ ಅನುಷ್ಠಾನಕ್ಕೆ ಉಭಯ ರಾಷ್ಟ್ರಗಳು ಸಮ್ಮತಿಸಿದ್ದು, ರಕ್ಷಣಾ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಒಪ್ಪಂದವೇರ್ಪಟ್ಟಿದೆ . ಗಡಿಭಾಗ ದುರುಪಯೋಗವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪರಸ್ಪರ ಕಾರ್ಯ ನಿರ್ವಹಿಸಲಾಗುವುದುಎಂದು ಮೋದಿ ತಿಳಿಸಿದರು.

ಇತರ ರಾಷ್ಟ್ರಗಳಿಗಿಂತ ಭಾರತದೊಂದಿಗಿನ ಸಂಬಂಧ ವೃದ್ದಿ ಕಡೆಗೆ ತಮ್ಮ ಆದ್ಯತೆ ಹೆಚ್ಚಿದ್ದು, ನೇಪಾಳಕ್ಕೆ ಬರುವಂತೆ ಮೋದಿಗೆ ಆಹ್ವಾನ ನೀಡಲಾಗಿದೆ ಎಂದು ಕೆ. ಪಿ. ಶರ್ಮಾ ಒಲಿ ಹೇಳಿದರು.

Comments are closed.