ಕರ್ನಾಟಕ

ರಾಹುಲ್‌ ಸಮ್ಮುಖದಲ್ಲಿ ಡಿಕೆಶಿಯನ್ನು ತಬ್ಬಿಕೊಂಡ ಸಿಎಂ!; ವೈರಲ್‌

Pinterest LinkedIn Tumblr


ಕೋಲಾರ: ಇಲ್ಲಿನ ಕುರುಡು ಮಲೆ ಗಣಪತಿ ದೇವಾಲಯಕ್ಕೆಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ತಬ್ಬಿಕೊಂಡ ಪ್ರಸಂಗ ನಡೆದಿದ್ದು, ಆ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಕೋಲಾರದಲ್ಲಿ ಪ್ರಚಾರ ನಿಮಿತ್ತ ಆಗಮಿಸಿದ ರಾಹುಲ್‌ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಸಿಎಂ ಸಿದ್ದರಾಮಯ್ಯ , ಸಚಿವ ಡಿಕೆಶಿ, ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಉಪಸ್ಥಿತರಿದ್ದರು.

ದೇವಾಲಯದಲ್ಲಿ ಸಿಎಂ ಅವರ ಎದುರು ಕುಳಿತಿರುವಡಿಕೆಶಿ ಅವರ ಹೆಗಲ ಮೇಲೆ ಸಲುಗೆಯಿಂದ ಕೈ ಹಾಕಿ ತಬ್ಬಿಕೊಂಡಿದ್ದಾರೆ. ಇದು ಸಾಮಾಜಿಕ ತಾಣಗಳಲ್ಲಿ ಟೀಕಾಕಾರಿಗೆ ಆಹಾರವಾಗಿದೆ.

ರಾಹುಲ್‌ ಕೋಲಾರ, ಬಂಗಾರಪೇಟೆ, ಕೆಜಿಎಫ್ನಲ್ಲಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

-ಉದಯವಾಣಿ

Comments are closed.