ಕರಾವಳಿ

ಕಾಮನ್‌ವೆಲ್ತ್ ಕ್ರೀಡೆಯ ‘ಬೆಳ್ಳಿ’ಹುಡುಗ ಗುರುರಾಜ್ ಪೂಜಾರಿಗೆ ಸರಕಾರಿ ಕೆಲಸ, 25 ಲಕ್ಷ!

Pinterest LinkedIn Tumblr

ಕುಂದಾಪುರ: ಆತ ಕಡು ಬಡತನದಲ್ಲಿ ಬೆಳದ ಹುಡುಗ , ಅದ್ರೇ ಇದೀಗ ದೇಶಕ್ಕೆ ಹೆಮ್ಮೆ ತಂದ ಯುವಕನಾಗಿದ್ದಾನೆ . ಅಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಪದಕ ತಂದು ಕೊಟ್ಟಿದ್ದು, ಕನ್ನಡದ ಕುವರ ಗುರುರಾಜ್ ಪೂಜಾರಿ. ಬೆಳ್ಳಿ ಗೆದ್ದ ಯುವಕನ ಹುಟ್ಟೂರಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ.

ಕಾಮನ್ ವೆಲ್ತ್ ನ 56 ಕೆ ಜಿ ಭಾರದ ವೈಟ್ ಲಿಫ್ಟಿಂಗ್ ನಲ್ಲಿ 249 ಕೆ ಜಿ ಭಾರ ಎತ್ತುವ ಮೂಲಕ ಗುರುರಾಜ್ ಪೂಜಾರಿ ಬೆಳ್ಳಿ ಪದಕವನ್ನು ಭಾರತಕ್ಕೆ ತಂದಿದ್ದು ಇಡೀ ಗ್ರಾಮ ಸಂಭ್ರಮದಲ್ಲಿ ಹಬ್ಬದ ವಾತವರಣ ಕಂಡು ಬರುತ್ತಿದೆ.ಅಷ್ಟೇ ಅಲ್ಲ ಗುರುರಾಜ್ ಕುಟುಂಬಸ್ಥರಿಗೂ ಕೂಡ ಎಲ್ಲಿಲ್ಲದ ಸಂಭ್ರಮ ಉಂಟು ಮಾಡಿದೆ.

ಕುಂದಾಪುರದ ಚಿತ್ತೂರಿನಲ್ಲಿರುವ ಗುರುರಾಜ್ ಮನೆ ಕುಟುಂಬಸ್ಥರು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು .ಕಷ್ಟ ಪಟ್ಟು ಬೆಳಸಿದ ಮಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಹೆಮ್ಮೆಯಿಂದ ಗುರುರಾಜ್ ಕೊಂಡಾಡಿದರು. ಗುರುರಾಜ್ ಸ್ನೇಹಿತರು ಹಾಫ಼ೂ ಬಂಧುಗಳು, ವಿವಿಧ ಕ್ಷೇತ್ರದ ಗಣ್ಯರು ನಿವಾಸಕ್ಕೆ ತೆರಳಿ ಹೆತ್ತವರನ್ನು ಅಭಿನಂದಿಸಿದರು.

ಡ್ರೈವರ್ ವೃತ್ತಿ ಮಾಡಿಕೊಂಡಿದ್ದ ಮಹಾಬಲ ಹಾಗೂ ಪದ್ದು ದಂಪತಿಗಳ 6 ಜನ ಮಕ್ಕಳಲ್ಲಿ ಗುರುರಾಜ್ ಐದನೆಯವರು. ಕಡು ಬಡತನದಿಂದ ಕುಟುಂಬದಿಂದ ಬಂದ ಗುರುರಾಜ್ ಬಾಲ್ಯದಲ್ಲಿಯೇ ಕ್ರೀಡಾಸಕ್ತಿಯನ್ನ ಬೆಳಸಿಕೊಂಡಿದ್ದು ಮಗನ ಅಸಕ್ತಿಗೆ ಆರ್ಥಿಕವಾಗಿ ಕಷ್ಟವಿದ್ದರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ತಂದೆ ಮಹಾಬಲ ಪೂಜಾರಿ ಕೋಲ್ಲೂರಿನ ಮೂಕಾಂಬಿಕಾ ಶಾಲೆಗೆ ಸೇರಿಸಿದ್ದರು.

ಶಾಲೆಯ ದೈಹಿಕ ಶಿಕ್ಷಕರು ಈತನಿಗೆ ರೇಸಿಂಗ್ ಹಾಗೂ ಪೋಲ್ ವಾಲ್ಟ್ ಆಸಕ್ತಿಗೆ ಪ್ರೋತ್ಸಾಹ ನೀಡಿ ಪದಕಗಳನ್ನು ಪಡೆಯಲು ಪ್ರೋತ್ಸಾಹಿಸಿದ್ದರು ನಂತರ ಕುಸ್ತಿಯಲ್ಲಿಯೂ ವಿಶೇಷ ತರಬೇತಿಯನ್ನ ಪಡೆದು ಹಲವಾರು ಪದಕಗಳನ್ನು ಗೆದ್ದಿದ್ದರು ,ಪಿಯೂ ಶಿಕ್ಷಣ ಮುಗಿಸಿದ ಗುರುರಾಜ್ ಉಜಿರೆಯಲ್ಲಿ ಪದವಿ ಶಿಕ್ಷಣಕ್ಕೆ ಸೇರಿದ್ದರು .ಅಲ್ಲಿ ತರಬೇತುದಾರಾರದ ಎಂ. ರಾಜೇಂದ್ರ ಗರಡಿಯಲ್ಲಿ ವೈಟ್ ಲಿಫ್ಟಿಂಗ್ ಪಳಗಿದ ಗುರುರಾಜ್ ಹಲವು ಪದಕಗಳು ಹಾಗೂ ದಾಖಲೆಗಳನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಬಾರಿ ಕೂಡ ಚಿನ್ನ ನಿರೀಕ್ಷೆಯಲ್ಲಿದ ಗುರುರಾಜ್ ಬೆಳ್ಳಿಗೆ ತೃಪ್ತಿ ಪಡುವಂತಾಗಿದೆ.

ಒಂದೆರಡು ತಿಂಗಳ ಹಿಂದಷ್ಟೆ ಕುಂದಾಪುರದ ಗುರುರಾಜ್ ಪ್ರತಿಭೆ ಗುರುತಿಸಿ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿಯನ್ನು ಕೂಡ ನೀಡಿತ್ತು. ಜಿಲ್ಲೆಯ ಯುವಕ ಕ್ರೀಡಾ ಕಾಮನ್ ವೆಲ್ತ್ ಪದಕ ಗೆದ್ದಿದ್ದಕ್ಕೆ ಕ್ರೀಡಾ ಮಂತ್ರಿಗಳು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.ಕ್ರೀಡಾ ನೀತಿಯಲ್ಲಿರುವಂತೆ ಗುರುರಾಜ್ ಅವರಿಗೆ ಸರ್ಕಾರದಿಂದ ನೀಡಲಾಗುವುದೆಂದು ಹೇಳಿದರು. ಸುಮಾರು ೨೫ ಲಕ್ಷ ನಗದು ಹಾಗೂ ಸರಕಾರಿ ಕೆಲಸ (ಗ್ರೂಫ್ ಬಿ) ನೀಡುವ ಅವಕಾಶವಿದೆ ಎಂದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಪಟ್ಟಿಯಲ್ಲಿ ಗುರುರಾಜ್ ಮೂರನೇವರಾಗಿದ್ದಾರೆ. ಕಾರ್ಕಳದ ಮಮತಾ ಪೂಜಾರಿ, ಕುಂದಾಪುರದ ಅಶ್ವಿನಿ ಅಕ್ಕುಂಜೆ ಸೇರಿದಂತೆ ಇದೀಗ ಗುರುರಾಜ್ ಪೂಜಾರಿ ಜಿಲ್ಲೆಯ ಹೆಸರನ್ನ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

Comments are closed.