ಕರಾವಳಿ

ದೀಪಕ್ ರಾವ್ ಹತ್ಯೆ : 13 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ

Pinterest LinkedIn Tumblr

ದೀಪಕ್ ರಾವ್

ಮಂಗಳೂರು, ಎಪ್ರಿಲ್. 6: ಜನವರಿ 3 ರಂದು ಸುರತ್ಕಲ್ ಸಮೀಪದ ಕಾಟಿಪಳ್ಳದ ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 13 ಮಂದಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಎಸಿಪಿ ಮಂಜುನಾಥ್ ಶೆಟ್ಟಿ ನೇತೃತ್ವದ ತನಿಖಾ ತಂಡ ಸುಮಾರು 500 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ದೀಪಕ್ ರಾವ್ ಹತ್ಯೆಯ ಬಳಿಕ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು. ಮುಹಮ್ಮದ್ ನವಾಝ್ ಯಾನೆ ಪಿಂಕಿ ನವಾಝ್, ರಿಝ್ವಾನ್ ಯಾನೆ ರಿಜ್ಜು, ಮುಹಮ್ಮದ್ ನೌಶಾದ್, ಮುಹಮ್ಮದ್ ಇರ್ಫಾನ್, ಅಬ್ದುಲ್ ಅಝೀಝ್, ಅಬ್ದುಲ್ ಅಝೀಮ್, ಮುಹಮ್ಮದ್ ರಫೀಕ್ ಯಾನೆ ಮ್ಯಾಂಗೋ ರಫೀಕ್, ಇರ್ಫಾನ್, ಮುಹಮ್ಮದ್ ಅನಸ್, ಮುಹಮ್ಮದ್ ಝಾಹಿದ್, ಹಿದಾಯತುಲ್ಲಾ, ಇಮ್ರಾನ್, ಸಫ್ವಾನ್ ಆರೋಪ ಪಟ್ಟಿಯಲ್ಲಿರುವವರು ಎಂದು ತಿಳಿದುಬಂದಿದೆ.

Comments are closed.