ಕ್ರೀಡೆ

ಐಪಿಎಲ್ ನಿಂದ ಶಮಿಯನ್ನು ಹೊರಗಿಡಿ: ಫ್ರಾಂಚೈಸಿಗೆ ಹಸೀನ್ ಮನವಿ

Pinterest LinkedIn Tumblr


ಮುಂಬೈ: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ಬಿಸಿಸಿಐ ನಿಂದ ಕ್ಲೀನ್ ಚಿಟ್ ಪಡೆದಿದ್ದರೂ, ಮುಂಬರುವ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿಸದಂತೆ, ಪತ್ನಿ ಹಸೀನ್ ಜಹಾನ್ ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿಗೆ ಮನವಿ ಮಾಡಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿಯ ಸಿಇಒ, ಹೇಮಂತ್ ದುವಾರೊಂದಿಗೆ ಮಾತು ಕತೆ ನಡೆಸಿರುವ ಶಮಿ ಪತ್ನಿ ಹಸೀನ್, ಕೌಟುಂಬಿಕ ಕಲಹ ಬಗೆಹರಿಯು ವವರೆಗೂ ಐಪಿಎಲ್ ನಲ್ಲಿ ಆಡಿಸಬಾರದೆಂದು ಕೋರಿದ್ದಾರೆ. ಶಮಿಗೆ ವಿವಾಹೇ ತರ ಸಂಬಂಧಗಳಿವೆ. ತನ್ನನ್ನು ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ದೂರಿದ್ದಾರೆ.

ವರ್ಷಾರಂಭದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿಯು ಶಮಿಯನ್ನು ‘ರೈಟ್ ಟೂ ಮ್ಯಾಚ್’ ಬಳಸಿ 3 ಕೋಟಿ ರು. ಖರೀದಿಸಿತ್ತು. ನಂತರ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಕ್ಲೀನ್ ಚಿಟ್ ಪಡೆದ ಬೆನ್ನಲ್ಲೇ ಬಿಸಿಸಿಐ, ಶಮಿಗೆ ‘ಬಿ’ಗ್ರೇಡ್ ಕಾಂಟ್ರಾಕ್ಟ್ ನೀಡಿದೆ.

ಶಮಿ ಪತ್ನಿ ಬಿಸಿಸಿಐನಲ್ಲಿ ಮನವಿ ಮಾಡಿದ್ದರೂ, ಕೌಟುಂಬಿಕ ಕಲಹವನ್ನು ಆಂತರಿಕವಾಗಿ ಪರಿಹರಿಸಿಕೊಳ್ಳಬೇಕು. ಶಮಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದು, ಐಪಿಎಲ್ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಉತ್ತಮ ನಿರ್ವಹಣೆಯನ್ನು ನಿರೀಕ್ಷಿಸು ತ್ತಿದ್ದೇವೆ ಎಂದು ಮಂಡಳಿಯ ಸಿ.ಕೆ.ಖನ್ನಾ ಪ್ರತಿಕ್ರಿಯಿಸಿದ್ದಾರೆ.

ಶಮಿ ಇತ್ತೀಚೆಗಷ್ಟೇ, ರಸ್ತೆ ಅಪಘಾತವೊಂದರಲ್ಲಿ ಗಾಯಾಳಾಗಿ, ಆಸ್ಪತ್ರೆಗೆ ದಾಖಲಾದಾಗ, ಪತ್ನಿ ಹಸೀನ್ ಭೇಟಿಯಿತ್ತರೂ, ಶಮಿ ನಿರಾಕರಿಸಿದ್ದರು.

Comments are closed.