ಕ್ರೀಡೆ

ಚೆಂಡು ವಿರೂಪ ಪ್ರಕರಣ; ಸ್ಟೀವ್‌ ಸ್ಮಿತ್‌ ಉತ್ತಮ ಬ್ಯಾಟ್ಸ್‌ಮನ್‌, ಒಳ್ಳೆಯ ಹುಡುಗ: ಯುವರಾಜ್‌ ಸಿಂಗ್‌

Pinterest LinkedIn Tumblr

ನವದೆಹಲಿ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟೀವ್ ಸ್ಮಿತ್‌ ಕುರಿತು ಕ್ರಿಕೆಟಿಗ ಯುವರಾಜ್‌ ಸಿಂಗ್‌ ಮರುಕ ವ್ಯಕ್ತಪಡಿಸಿದ್ದಾರೆ.

‘ಸ್ಮಿತ್‌ನನ್ನು ಈ ಸ್ಥಿತಿಯಲ್ಲಿ ನೋಡಲು ನಿಜಕ್ಕೂ ದುಃಖವಾಗುತ್ತಿದೆ. ಆತ ತಪ್ಪು ಮಾಡಿದ್ದಾನೆ, ಅದರ ಪರಿಣಾಮ ಎದುರಿಸುತ್ತಿದ್ದಾನೆ ಎಂಬುದು ನಮಗೆ ಗೊತ್ತು. ಆತ ಆಸ್ಟ್ರೇಲಿಯಾ ತಂಡ ಯಶಸ್ಸಿನ ಉತ್ತುಂಗಕ್ಕೆ ಏರಲು ಶ್ರಮಿಸಿದ ಒಳ್ಳೆಯ ಹುಡುಗ, ದಿಗ್ಗಜ ಬ್ಯಾಟ್ಸ್‌ಮನ್‌ ಎಂಬುದನ್ನು ಮರೆಯಬಾರದು. ಹಾಗೆಯೇ ‘ಬಾಲ್‌ ವಿರೂಪಗೊಳಿಸುವ ಕೃತ್ಯ ನಡೆಸಿದ ಮೊದಲಿಗನೇನಲ್ಲ’ ಎಂದು ಶುಕ್ರವಾರ ಟ್ವೀಟ್‌ ಮಾಡಿದ್ದರು.

Comments are closed.