ರಾಷ್ಟ್ರೀಯ

ಭಾರತೀಯ ರೈಲ್ವೆ ಇಲಾಖೆಯಿಂದ ‘ಸಲೂನ್’ ಐಶಾರಾಮಿ ಬೋಗಿಗಳ ಸೇವೆ ಆರಂಭ

Pinterest LinkedIn Tumblr

ನವದೆಹಲಿ: ಸಾಮಾನ್ಯ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯ ನೀಡುವ ರೈಲ್ವೆ ಸಲೂನ್ ಐಶಾರಾಮಿ ಬೋಗಿಗಳನ್ನು ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದೆ. ದೆಹಲಿ ಹಳೆ ರೈಲ್ವೆ ನಿಲ್ದಾಣದಿಂದ ನಿನ್ನೆ ಹೊರಟ ರೈಲ್ವೆಯಲ್ಲಿ ಈ ಸೌಲಭ್ಯವಿದೆ.

ಈ ಬಗ್ಗೆ ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದ್ದು, ಚಲಿಸುವ ಮನೆಯಂತೆ ಈ ಸಲೂನ್ ಇದ್ದು ಅದರಲ್ಲಿ ಎರಡು ವಿಶೇಷ ಬೆಡ್ ರೂಂ, ಬಾತ್ ರೂಂ, ಲಿವಿಂಗ್ ರೂಂ ಮತ್ತು ಡೈನಿಂಗ್ ರೂಂ ಹಾಗೂ ಅಡುಗೆ ಮನೆಯಿದೆ. ಮೊದಲ ಖಾಸಗಿ ನಿಯಂತ್ರಿತ ಸಲೂನ್ ಕೋಚ್ ನಲ್ಲಿ ಹವಾನಿಯಂತ್ರಿತ ಕೋಣೆ ಮತ್ತು ವಾಲೆಟ್ ಸೇವೆ ಆರಂಭಿಸಿದ್ದು ಆರು ಮಂದಿ ಸೇವೆ ಪಡೆದಿದ್ದಾರೆ.

ಐಆರ್ ಸಿಟಿಸಿ ಆರಂಭಿಸಿರುವ ರೈಲ್ವೆ ಸಲೂನ್ ಇರುವ ಬೋಗಿ ನಿನ್ನೆ ಹಳೆ ದೆಹಲಿ ರೈಲ್ವೆ ನಿಲ್ದಾಣದಿಂದ ಹೊರಟ ರೈಲಿನ ಸಲೂನ್ ನಲ್ಲಿ 6 ಮಂದಿ ಪ್ರಯಾಣಿಸಿದ್ದಾರೆ.

Comments are closed.