ಕರ್ನಾಟಕ

ಕಾಂಗ್ರೆಸ್ ಜತೆ ಚುನಾವಣಾ ಪೂರ್ವ ಮೈತ್ರಿಗೆ ಮುಂದಾದ ದೇವೇಗೌಡ?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ ನಮಗೆ ಎಷ್ಟು ಸೀಟ್​ ಬಿಟ್ಟುಕೊಡುತ್ತದೆ, ನಾವು ಅವರಿಗೆ ಎಷ್ಟು ಸೀಟ್​ ಬಿಟ್ಟುಕೊಡಬೇಕು. ಈ ಬಗ್ಗೆ ಚರ್ಚಿಸಿ ಕಾಂಗ್ರೆಸ್ ನಮಗೆ ತಿರ್ಮಾನ ತಿಳಿಸಲಿ ಎಂದು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ತಿಳಿಸಿದ್ದಾರೆ.

ಕರ್ನಾಟಕ ಸಂಘಟನೆ ಇಂದು ದೇವೇಗೌಡರನ್ನು ಭೇಟಿ ಮಾಡಿ ಬಿಜೆಪಿ ಸೋಲಿಸಲು ಜೆಡಿಎಸ್, ಕಾಂಗ್ರೆಸ್​ ಒಂದಾಗಬೇಕೆಂದು ಮನವಿ ಸಲ್ಲಿಸಿದರು. ಮನವಿಗೆ ಪ್ರತಿಕ್ರಿಯಿಸಿದ ದೇವೇಗೌಡರು ಕಾಂಗ್ರೆಸ್​ ದೊಡ್ಡ ಪಕ್ಷ, ಅವರೇ ಮೊದಲು ಪಟ್ಟಿ ಕಳುಹಿಸಲು, ಮೈತ್ರಿ ಪ್ರಸ್ತಾವನೆ ಬಂದರೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾಜವಾದಿ ಪಕ್ಷ ಸೀಟು ಕೇಳಿದರೆ ಅವರಿಗೂ ಕೆಲವು ಸೀಟು ಬಿಟ್ಟುಕೊಡಲು ಸಿದ್ಧ. ನೀವೆಲ್ಲರೂ ಸದುದ್ದೇಶದಿಂದ ಇಲ್ಲಿಗೆ ಬಂದಿದ್ದೀರಿ, ಹೀಗಾಗಿ ನಿಮ್ಮ ಮನವಿಯನ್ನು ಪರಿಶೀಲಿಸುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.

Comments are closed.