ಅಂತರಾಷ್ಟ್ರೀಯ

ಆಸಿಸ್ ಕ್ರಿಕೆಟಿಗರ ವಿರುದ್ದ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ವಕಾರ್ ಯೂನಿಸ್, ಅವರದೇ ಕೃತ್ಯ ನೆನಪಿಸಿದ ಟ್ವೀಟಿಗರು!

Pinterest LinkedIn Tumblr


ಇಸ್ಲಾಮಾಬಾದ್: ಚೆಂಡು ವಿರೂಪಗೊಳಿಸಿದ ಪ್ರಕರಣ ಇದೀಗ ವಿಶ್ವವ್ಯಾಪಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.

ಹೌದು.. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸಿಸ್ ನಾಯಕ ಸ್ಟೀವ್ ಸ್ಮಿತ್ ಹಾಗೂ ವೇಗಿ ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಆಸಿಸ್ ತಂಡದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಪಾಕಿಸ್ತಾನದ ಮಾಜಿ ವೇಗೆ ವಕಾರ್ ಯೂನಿಸ್ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಈ ಬಗ್ಗೆ ವಕಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಪೇಚಿಗೆ ಸಿಲುಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಕಾರ್, ಆಸಿಸ್ ನಾಯಕನ ಹೇಳಿಕೆಯನ್ನುದ್ದೇಶಿಸಿ ಇದು ಮೊದಲ ಕೃತ್ಯ ಎಂದು ಹೇಳಬೇಡಿ.. ಆಸ್ಟ್ರೇಲಿಯಾ ಕ್ರಿಕೆಟ್ ನ ಇತಿಹಾಸ ಕೆದಕಿದರೆ ಇಂತಹ ಹಲವು ಪ್ರಕರಣಗಳು ಸಿಗುತ್ತವೆ ಎನ್ವುವ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದೀಗ ವಕಾರ್ ಯೂನಿಸ್ ಅವರ ಟ್ವೀಟ್ ಗೆ ಕ್ರಿಕೆಟ್ ಅಭಿಮಾನಿಗಳು ಟಾಂಗ್ ನೀಡಿದ್ದು, ಮತ್ತೊಬ್ಬರ ತಪ್ಪನ್ನು ಅಪಹಾಸ್ಯ ಮಾಡಬೇಡಿ.. ನಿಮ್ಮದೇ ತಪ್ಪನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ವಕಾರ್ ಯೂನಿಸ್ ಅವರ ಕಾಲೆಳೆದಿದ್ದಾರೆ.

2000ರಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ವೇಗಿ ವಕಾರ್ ಯೂನಿಸ್ ತಮ್ಮ ಉಗುರಿನ ಮೂಲಕ ಚೆಂಡಿನ ಸೀಮ್‌ ಅನ್ನು ವಿರೂಪಗೊಳಿಸಿದ್ದರು. ಅಂದಿನ ಪಂದ್ಯದ ರೆಫರಿ ಜಾನ್ ರೀಡ್ ಅವರು ಘಟನೆಯನ್ನು ಪರಿಶೀಲಿಸಿ ವಕಾರ್ ಯೂನಿಸ್ ಒಂದು ಪಂದ್ಯದ ನಿಷೇಧ ಹೇರಿದ್ದರು. ಈ ಘಟನೆಯನ್ನು ಟ್ವೀಟಿಗರು ಉಲ್ಲೇಖ ಮಾಡಿ ವಕಾರ್ ಯೂನಿಸ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

Comments are closed.