ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿ ಇಂದು ಭಗತ್ ಸಿಂಗ್ ದಾಖಲೆಗಳ ಪ್ರದರ್ಶನ

Pinterest LinkedIn Tumblr


ಲಾಹೋರ್‌: ಪಾಕಿಸ್ತಾನ ಸರಕಾರ ಇದೇ ಮೊದಲ ಬಾರಿಗೆ ಭಾರತದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಭಗತ್‌ ಸಿಂಗ್‌ ಅವರ ಹೋರಾಟದ ಸಂಪೂರ್ಣ ವಿವರಗಳನ್ನು ಇತರ ಐತಿಹಾಸಿಕ ದಾಖಲೆಗಳ ಜತೆ ಪ್ರದರ್ಶನಕ್ಕಿಡಲು ತೀರ್ಮಾನಿಸಿದೆ.

ಪಂಜಾಬ್‌ (ಪಾಕಿಸ್ತಾನದ ಪ್ರಾಂತ್ಯ) ಪ್ರಾಚ್ಯವಸ್ತು ಇಲಾಖೆ ಇರುವ ಲಾಹೋರ್‌ನ ಅನಾರ್ಕಲಿ ಸ್ಮಾರಕದಲ್ಲಿ ಸೋಮವಾರ ಪ್ರದರ್ಶನ ಏರ್ಪಡಿಸಲಾಗಿದೆ. ಪಂಜಾಬ್‌ ಸರಕಾರದ ಮುಖ್ಯ ಕಾರ್ಯದರ್ಶಿ ಝಹೀದ್‌ ಸಯೀದ್‌ ಸಾರಥ್ಯದಲ್ಲಿ ನಡೆದ ಉನ್ನತಾಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ವೇಳೆ, ಕ್ರಾಂತಿವಾದಿ ಭಗತ್‌ ಸಿಂಗ್‌ ಅವರನ್ನು ‘ಭಾರತ ಮತ್ತು ಪಾಕಿಸ್ತಾನ ದೇಶಗಳ ಹೀರೊ’ ಎಂದು ಸಾರಲಾಯಿತು.

”ಭಗತ್‌ ಸಿಂಗ್‌ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಸ್ವಾತಂತ್ರ್ಯ ಚಳವಳಿಯ ಹೀರೊ. ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸುವುದಕ್ಕಾಗಿ ಭಗತ್‌ ಸಿಂಗ್‌ ಮತ್ತು ಅವರ ಒಡನಾಡಿಗಳು ಶ್ರಮಿಸಿದ ಪರಿಯನ್ನು ತಿಳಿದುಕೊಳ್ಳಲು ದೇಶದ ಪ್ರತಿಯೊಬ್ಬ ಪ್ರಜೆಗೆ ಅಕಾರವಿದೆ,” ಎಂದು ಪಂಜಾಬ್‌ ಸರಕಾರದ ಅಕಾರಿಯೊಬ್ಬರು ಭಾನುವಾರ ಹೇಳಿದರು.

ಸಿಂಗ್‌ ಜೈಲಿನಲ್ಲಿದ್ದಾಗ ತಂದೆಗೆ ಬರೆದ ವಿವಿಧ ಪತ್ರಗಳು; ಹತ್ತಾರು ಪುಸ್ತಕಗಳು, ದಿನಪತ್ರಿಕೆಗಳು, ಭೂಗತವಾಗಿದ್ದ ವೇಳೆ ಆತ ಮತ್ತು ಇತರರು ವಾಸ್ತವ್ಯ ಹೂಡಿದ್ದ ಹೋಟೆಲ್‌ ದಾಖಲೆಗಳು ಕೂಡ ಸೋಮವಾರದ ಪ್ರದರ್ಶನ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಭಗÜತ್‌ ಸಿಂಗ್‌ ಕುರಿತ ‘ಕೇಸ್‌ ಫೈಲ್‌’ಗಳು ಬ್ರಿಟಿಷ್‌ ಭಾರತದ ಪೊಲೀಸರು ಹಾಗೂ ಏಜೆನ್ಸಿಗಳು ಭಾರತದ ವಿವಿಧೆಡೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಚ್ಚೂಕಡಿಮೆ 25 ಸದಸ್ಯರನ್ನೊಳಗೊಂಡ ‘ಸಿಂಗ್‌ ಪಡೆ’ಯನ್ನು ಹೇಗೆ ಹತ್ತಿಕ್ಕಿದವು ಎಂಬುದೂ ಸೇರಿದಂತೆ ಸಿಂಗ್‌ ಕುರಿತ ಅನೇಕ ಮಾಹಿತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿವೆ.

”ಸೌಲಭ್ಯಗಳಿಗಾಗಿ ತಾನು ಬರೆಯುವ ಅರ್ಜಿಗಳಿಗೆ ಆತ ತಪ್ಪದೇ ಸಹಿ ಹಾಕುತ್ತಿದ್ದರು. ಆದರೆ, ಸಂಪ್ರದಾಯದಂತೆ, ಅರ್ಜಿಯ ಕೊನೆಯಲ್ಲಿ ಆತ ‘ನಿಮ್ಮ ವಿಶ್ವಾಸಿ’ ಅಥವಾ ‘ನಿಮ್ಮ ವಿಧೇಯ’ ಎಂದು ನಮೂದಿಸುತ್ತಿರಲಿಲ್ಲ. ಬದಲಿಗೆ, ಅಲ್ಲಿ ‘ನಿಮ್ಮ ಇತ್ಯಾದಿ… ಇತ್ಯಾದಿ’ ಎಂದು ಪದಗಳಿರುತ್ತಿದ್ದವು. ಇದು ಆತ ದಬ್ಬಾಳಿಕೆಗೆ ಹೇಗೆ ಪ್ರತಿರೋಧ ಒಡ್ಡುತ್ತಿದ್ದರು ಎಂಬುದಕ್ಕೆ ದ್ಯೋತಕ,” ಎಂದು ಅಕಾರಿ ಹೇಳಿದ್ದಾರೆ.

Comments are closed.