ಕರ್ನಾಟಕ

ಸಿದ್ಧಗಂಗಾ ಮಠಕ್ಕೆ ಶಾ:ಮತ್ತೆ ಭಿನ್ನಮತ ಬಯಲು; ಪ್ರತಿಭಟನೆ!

Pinterest LinkedIn Tumblr


ತುಮಕೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶತಾಯುಷಿ ಡಾ. ಶಿವಕುಮಾರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ , ಪ್ರಹ್ಲಾದ್‌ ಜೋಷಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿಗೆ ಇನ್ನಷ್ಟು ಬಲ

ಶ್ರೀಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾ ‘ಶ್ರೀಗಳ ಭೇಟಿ ಬಹಳ ಸಂತಸ ತಂದಿದೆ. ಶ್ರೀಗಳ ಆಶೀರ್ವಾದದಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ಅವರು à ವಯಸ್ಸಿನಲ್ಲಿ ಇಷ್ಟೊಂದು ಸಂಸ್ಥೆಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಚ್ಚರಿ’ ಎಂದರು.

‘ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು.

ಬಿಜೆಪಿ ಭಿನ್ನಮತ ಬಯಲು, ಪ್ರತಿಭಟನೆ
ಶಾ ಭೇಟಿಗೂ ಮುನ್ನ ಮಠದ ಆವರಣದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬೆಂಬಲಿಗರು ಪ್ರತಿಭಟನೆ ನಡೆಸಿರುವುದು ಪಕ್ಷಕ್ಕೆ ತೀವ್ರ ಮುಜುಗರ ತಂದಿಟ್ಟಿತು. ಜಿಲ್ಲಾ ಘಟಕದಲ್ಲಿರುವ ಭಿನ್ನಮತ ಮತ್ತೆ ಬಯಲಾಗಿದ್ದು ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಶಾ ಅವರ ಭೇಟಿ ವೇಳೆ ಪಾಸ್‌ ವಿತರಣೆಯಲ್ಲಿ ನಮಗೆ ತಾರತಮ್ಯ ಮಾಡಲಾಗಿದೆ ಎಂದು ಶಿವಣ್ಣ ಬೆಂಬಲಿಗರು ಆರೋಪಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕಾಗಮಿಸಿದ ಶಿವಣ್ಣ ಕ್ಷಮಿಸಿ ಈಗ ಪ್ರತಿಭಟನೆ ನಡೆಸಬೇಡಿ, ಕ್ಷಮಿಸಿ …ಪಾಸ್‌ ಇದ್ದವರು ಬನ್ನಿ ..ಉಳಿದವರು ಸ್ಥಳದಿಂದ ತೆರಳಿ , ಪ್ರತಿಭಟನೆ ಈಗ ಮಾಡಬಾರದು ಎಂದು ಮನವೊಲಿಸಿದರು.

ವಲಸಿಗರಿಗೆ ಆಧ್ಯತೆ

ಅಮಿತ್‌ಶಾ ಅವರಿಗೆ ಶಿವಣ್ಣ ಬೆಂಬಲಿಗರು ಮೂಲ ಬಿಜೆಪಿ ಕಾರ್ಯಕರ್ತರನ್ನು ಇಲ್ಲಿ ಕಡೆಗಣಿಸಲಾಗುತ್ತಿದೆ. ವಲಸಿಗರಿಗೆ ಆಧ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ಮನವಿ ಪತ್ರ ನೀಡಿದ್ದಾರೆ ಎಂದು ವರದಿಯಾಗಿದೆ.

-ಉದಯವಾಣಿ

Comments are closed.