ಕ್ರೀಡೆ

ಅತ್ಯುತ್ತಮ ಕ್ರಿಕೆಟಿಗನೆಂದು ಸಾಬೀತುಪಡಿಸಲು ರೈನಾಗೆ ಅವಕಾಶ

Pinterest LinkedIn Tumblr


ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಸುರೇಶ್ ರೈನಾ ಅವರಿಗೆ ಉತ್ತಮ ಕ್ರಿಕೆಟಿಗರಲ್ಲಿ ತಾನೇ ಅತ್ಯುತ್ತಮ ಎಂಬುದನ್ನು ಸಾಬೀತುಪಡಿಸುವ ಸಮಯವಿದು.

2018ನೇ ಸಾಲಿನಲ್ಲಿ ಇಂಡಿಯನ್ ಪ್ರೀಮಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿರುವ ರೈನಾಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವ ಅವಕಾಶ ಬಂದಿದೆ.

ತಮ್ಮ ನೆಚ್ಚಿನ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡುವಾಗ ರೈನಾ ಅವರಿಗೆ ಇದಕ್ಕಿಂತಲೂ ಉತ್ತಮವಾದ ಅವಕಾಶ ಬೇರೆ ಸಿಗಲಾರದು.

ಕಳಪೆ ಫಾರ್ಮ್ ಹಾಗೂ ಫಿಟ್ನೆಸ್‌ನಿಂದಾಗಿ ದೀರ್ಘ ಕಾಲದಿಂದ ಭಾರತ ತಂಡದಿಂದ ಹೊರಬಿದ್ದಿರುವ ಸುರೇಶ್ ರೈನಾ, ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಗಮನಾರ್ಹ ಪ್ರದರ್ಶನದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು.

ತದಾ ಬಳಿಕ ಶ್ರೀಲಂಕಾದಲ್ಲಿ ಸಾಗಿದ ನಿಧಹಸ್ ತ್ರಿಕೋನ ಟ್ವೆಂಟಿ-20 ಸರಣಿಯಲ್ಲೂ ಛಾಪು ಮೂಡಿಸಿರುವ ಅನುಭವಿ ರೈನಾ, ಇದೀಗ ಏಕದಿನ ತಂಡಕ್ಕೂ ಪುನರಾಗಮನ ಮಾಡಿಕೊಳ್ಳಲು ಗುರಿಯಿರಿಸಿಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಕೋನದಲ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿಕೊಳ್ಳಲು ಐಪಿಎಲ್ ರೈನಾ ಪಾಲಿಗೆ ನಿರ್ಣಾಯಕವೆನಿಸಲಿದೆ.

Comments are closed.