ಮನೋರಂಜನೆ

ಲಂಡನ್‌ನಲ್ಲಿ ಉದ್ಯಮಿ ಆನಂದ್‌ ಅಹುಜಾ – ಸೋನಮ್‌ ಮದುವೆ ?

Pinterest LinkedIn Tumblr


ಹೊಸದಿಲ್ಲಿ: ಬಾಲಿವುಡ್‌ ತಾರೆ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ವಿದೇಶದಲ್ಲಿ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಬಂಧನಕ್ಕೆ ಒಳಗಾದ ಬಳಿಕದಲ್ಲಿ ಈಗ ಬಾಲಿವುಡ್‌ನ‌ ಇನ್ನೋರ್ವ ನಟಿ ಸೋನಮ್‌ ಕಪೂರ್‌ ಮತ್ತು ಉದ್ಯಮಿ ಆನಂದ್‌ ಅಹುಜಾ ಅವರ ಮದುವೆ ಲಂಡನ್‌ನಲ್ಲಿ ನಡೆಯಲಿದೆ ಎಂಬ ವದಂತಿ ಈಗ ದಟ್ಟವಾಗಿ ಸುತ್ತು ಹೊಡೆಯುತ್ತಿದೆ.

ಸೋನಮ್‌ – ಆನಂದ್‌ ಈ ವರ್ಷ ಜೂನ್‌ನಲ್ಲೇ ಲಂಡನ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು “ಬಾಲಿವುಡ್‌ ಲೈಫ್’ ವರದಿ ಮಾಡಿದೆ.

ಸೋನಮ್‌ ಕೈಯಲ್ಲಿ ಈಗಿರುವ ವೀರೇ ಡಿ ವೆಡ್ಡಿಂಗ್‌ ಚಿತ್ರ ಬಿಡುಗಡೆಯಾದ ಬಳಿಕ ಲಂಡನ್‌ನಲ್ಲಿ ಆನಂದ್‌ ಜತೆಗೆ ಆಕೆ ಮದುವೆಯಾಗಲಿದ್ದಾರೆ ಎಂದು ಬಾಲಿವುಡ್‌ ಲೈಫ್ ಹೇಳಿದೆ.

ವಿಶೇಷವೆಂದರೆ ಸೋನಮ್‌ ಈ ತನಕವೂ ತನ್ನ ಖಾಸಗಿ ಬದುಕಿನ ಬಗ್ಗೆ ಯಾರಲ್ಲೂ ಎಲ್ಲಿಯೂ ಏನನ್ನೂ ಹೇಳಿಲ್ಲ; ಆನಂದ್‌ ಜತೆಗೆ ತನಗೆ ಬಾಂಧವ್ಯವಿದೆ ಎಂದೂ ಆಕೆ ಬಾಯಿ ಬಿಟ್ಟಿಲ್ಲ.

ಒಟ್ಟಿನಲ್ಲಿ ಈಗ ಜೂನ್‌ ವರೆಗೆ ಕಾಯುವ ಸರದಿ ಸೋನಮ್‌ ಅಭಿಮಾನಿಗಳದ್ದು !

-ಉದಯವಾಣಿ

Comments are closed.