ರಾಷ್ಟ್ರೀಯ

ಬಿಹಾರ ಮೂಲಕ ಐಸಿಸ್‌ ಭಯೋತ್ಪಾದಕಿಗೆ ಏಳು ವರ್ಷ ಕಠಿಣ ಸಜೆ

Pinterest LinkedIn Tumblr


ಕೊಚ್ಚಿ: ಕೇರಳದ ಮೊಟ್ಟ ಮೊದಲ ಇಸ್ಲಾಮಿಕ್‌ ಸ್ಟೇಟ್‌ ಸಂಬಂಧಿತ ಪ್ರಕರಣದಲ್ಲಿ, ಐಸಿಸ್‌ ಭಯೋತ್ಪಾದಕಿ ಯಸ್ಮಿನ್‌ ಮೊಹಮ್ಮದ್‌ ಜಾಹಿದ್‌ಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ನ್ಯಾಯಾಲಯ, ಬಿಹಾರ ಮೂಲಕ ಮಹಿಳೆ ಯಾಸ್ಮಿನ್‌ಗೆ ಶಿಕ್ಷೆ ಪ್ರಕಟಿಸಿದೆ. ಯಾಸ್ಮಿನ್‌ ಐಸಿಸ್‌ ಹಿಡಿತದಲ್ಲಿದ್ದ ಅಫ್ಘಾನಿಸ್ತಾನಕ್ಕೆ ತನ್ನ ಮಗನೊಂದಿಗೆ ಪಲಾಯನಗೈಯ್ಯಲು ಯತ್ನಿಸಿದ್ದಳು.

ಕಾರಾಗೃಹ ಶಿಕ್ಷೆಯಲ್ಲದೇ ಯಾಸ್ಮಿನ್‌ಗೆ 25,000ರುಗಳ ದಂಡ ವಿಧಿಸಲಾಗಿದೆ.

2016ರ ಮೇ-ಜುಲೈ ಅವಧಿಯಲ್ಲಿ ಕೇರಳದ ಕಾಸರಗೋಡಿನ 14 ಮಂದಿ ತಮ್ಮ ಕುಟುಂಬಗಳ ಜತೆ ಸೇರಿ ದೇಶದಿಂದ ಪಲಾಯನಗೈದು ಐಸಿಸ್‌ ಸೇರಲು ಇಚ್ಛಸಿದ್ದರು.

ಯಾಸ್ಮಿನ್‌ಳಂತೆ ಇನ್ನಷ್ಟು ಮಂದಿಯನ್ನು ಐಸಿಸ್‌ ಭಯೋತ್ಪಾದಕ ಸಂಘಟನೆಗೆ ನೇಮಕ ಮಾಡಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ರಶೀದ್‌ ಅಬ್ದುಲ್ಲ, ಕಾಸರಗೋಡು ಹಾಗು ಇನ್ನಿತರ ಸ್ಥಳಗಳಲ್ಲಿ ಮೂಲಭೂತವಾದ ಹಾಗು ಭಯೋತ್ಪಾದನೆಯತ್ತ ವಾಲಿಸುವ ನಿಟ್ಟಿನಲ್ಲಿ ಬೋಧನೆ ನೀಡುತ್ತಿದ್ದ ಎಂದು ಎನ್‌ಐಎ ತಿಳಿಸಿದೆ.

ಜುಲೈ 30, 2016ರಲ್ಲಿ ಕಾಬೂಲ್‌ಗೆ ತೆರಳುತ್ತಿದ್ದ ವೇಳೆ ಯಾಸ್ಮಿನ್‌ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಯಾಸ್ಮಿನ್‌, ಅಫ್ಘಾನಿಸ್ತಾನದ ಐಸಿಸ್‌ ಹಿಡಿತದಲ್ಲಿರುವ ನಂಗರ್‌ಹರ್‌ ಪ್ರದೇಶದಲ್ಲಿರುವ ತನ್ನ ಪತಿ ಹಾಗು ಸಹ ಭಯೋತ್ಪಾದಕ ಅಬ್ದುಲ್‌ ರಶೀದ್‌ನನ್ನು ಸೇರಲು ಹೊರಟಿದ್ದಳು.

ಭಾರತೀಯ ದಂಡ ಸಂಹಿತೆಯ 120ಬಿ ಹಾಗು 125(ಭಾರತ ಸರಕಾರದೊಂದಿಗೆ ಮೈತ್ರಿಯಲ್ಲಿರುವ ಏಷ್ಯಾದ ದೇಶದ ವಿರುದ್ಧ ಯುದ್ಧ ಸಾರಿದ ಆರೋಪ) ಅನುಚ್ಛೇದಗಳ ಅನ್ವಯ ಹಾಗು ವಿಧ್ವಂಸಕ ಕಾಯಿದೆ(ತಡೆ)ಯ 38,39 ಹಾಗು 40ರ ಅನ್ವಯ ಯಾಸ್ಮಿನ್‌ಗೆ ಶಿಕ್ಷೆ ವಿಧಿಸಲಾಗಿದೆ.

Comments are closed.