ಕ್ರೀಡೆ

2019ರ ವಿಶ್ವಕಪ್ ತಂಡಗಳು ಪ್ರಕಟ; ತಂಡಗಳ ಪಟ್ಟಿ ಇಲ್ಲಿದೆ!

Pinterest LinkedIn Tumblr

ನವದೆಹಲಿ: 2019ರ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯ ಪಂದ್ಯಗಳು ಮುಕ್ತಾಯವಾಗಿದ್ದು, ಸೂಪರ್ ಸಿಕ್ಸ್ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅಪ್ಘಾನಿಸ್ತಾನ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.

ಆ ಮೂಲಕ ಆಫ್ಘಾನಿಸ್ತಾನ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುವ 2019 ರ ವಿಶ್ವಪಕ್‍ ಟೂರ್ನಿಗೆ ಅರ್ಹತೆ ಪಡೆದಿದ್ದು, 2019 ರ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳ ಪಟ್ಟಿ ಖಚಿತವಾದಂತಾಗಿದೆ. 2019 ರ ಟೂರ್ನಿ ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿದೆ.

2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳ ಪಟ್ಟಿ ಇಂತಿದೆ
1. ಭಾರತ
2. ಆಸ್ಟ್ರೇಲಿಯಾ
3. ಶ್ರೀಲಂಕಾ
4. ಇಂಗ್ಲೆಂಡ್
5. ಬಾಂಗ್ಲಾದೇಶ
6. ದಕ್ಷಿಣ ಆಫ್ರಿಕಾ
7. ನ್ಯೂಜಿಲೆಂಡ್
8. ಪಾಕಿಸ್ತಾನ
9. ವೆಸ್ಟ್ ಇಂಡೀಸ್
10. ಅಪ್ಘಾನಿಸ್ತಾನ

Comments are closed.