ರಾಷ್ಟ್ರೀಯ

ಬಹುಕೋಟಿ ವಂಚನೆ ಪ್ರಕರಣ; ನೀರವ್‌ ಮೋದಿಗೆ ಸೇರಿದ ₹ 26 ಕೋಟಿ ಮೌಲ್ಯದ ವಸ್ತುಗಳ ಮುಟ್ಟುಗೋಲು

Pinterest LinkedIn Tumblr

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹12,000 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ನೀರವ್‌ ಮೋದಿ ಅವರಿಗೆ ಸೇರಿದ ₹ 26 ಕೋಟಿ ಮೌಲ್ಯದ ವಸ್ತುಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಮುಂಬೈನ ವರ್ಲಿ ಪ್ರದೇಶದಲ್ಲಿರುವ ಸಮುದ್ರ ಮಹಲ್‌ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸದ್ಯ ₹ 15 ಕೋಟಿ ಮೌಲ್ಯದ ಪುರಾತನ ಆಭರಣಗಳು, ₹ 1.4 ಕೋಟಿ ಮೌಲ್ಯದ ದುಬಾರಿ ಕೈಗಡಿಯಾರ, ಖ್ಯಾತ ಚಿತ್ರಕಾರರಾದ ಅಮೃತಾ ಶೇರ್-ಗಿಲ್, ಎಂ.ಎಫ್ ಹುಸೇನ್ ರಚಿಸಿರುವ ₹ 10 ಕೋಟಿ ಮೌಲ್ಯದ ವರ್ಣಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿ ಹಾಗೂ ಅವರ ಸಂಬಂಧಿ ಮೆಹುಲ್‌ ಚೋಕ್ಸಿ ವಿರುದ್ಧ ಸಿಬಿಐ ಅಧಿಕಾರಿಗಳು ಮತ್ತೆರಡು ಎಫ್‌ಐಆರ್‌ ದಾಖಲಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕೋರಿಕೆ ಮೇರೆಗೆ ಅವರ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ.

Comments are closed.