ಕರ್ನಾಟಕ

ಅಧಿಕಾರ ವಹಿಸಿಕೊಂಡ 2 ವಾರಗಳಲ್ಲೇ ಬೆಂಗಳೂರಿನ ರೌಡಿಗಳಿಗೆ ನಡುಕ ಹುಟ್ಟಿಸಿದ ರವಿ ಚೆನ್ನಣ್ಣನವರ್

Pinterest LinkedIn Tumblr

ಬೆಂಗಳೂರು: ರವಿ ಚೆನ್ನಣ್ಣನವರ್ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ 2 ವಾರಗಳಲ್ಲೇ ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕ್ತಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗ್ಗೆಯಿಂದ ರಾತ್ರಿ 2 ಗಂಟೆವರೆಗೆ ಸಿಟಿ ರೌಂಡ್ಸ್‍ನಲ್ಲಿ ಒಬ್ಬೊಂಟಿಗರಾಗಿ ಗಸ್ತು ನಡೆಸ್ತಿದ್ದಾರೆ. ಬ್ಯಾಟರಾಯನಪುರ, ಜ್ಞಾನಭಾರತಿ, ಕೆಂಗೇರಿ, ಕಾಮಾಕ್ಷಿಪಾಳ್ಯ ಇತರೆ ಸ್ಟೇಷನ್‍ಗಳ ವ್ಯಾಪ್ತಿಯಲ್ಲಿ ರೌಡಿಗಳನ್ನು ಕರೆಸಿ ವಾರ್ನಿಂಗ್ ಕೊಟ್ಟಿರುವ ಚೆನ್ನಣ್ಣನವರ್, ರೌಡಿಗಳಿಗೆ ನಡುಕ ಹುಟ್ಟಿಸಿದ್ದಾರೆ.

ನಗರದಲ್ಲೆಡೆ ವೇಶ್ಯಾವಾಟಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದು, ಸಿಟಿಯಲ್ಲಿ ಡಬಲ್ ಮೀಟರ್ ಕೇಳೋ ಆಟೋ ಚಾಲಕರಿಗೂ ಕರೆಸಿ ಬುದ್ಧಿ ಹೇಳಿದ್ದಾರೆ. ಅಲ್ಲದೇ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಕರ್ತವ್ಯ ಪಾಲನೆಯಲ್ಲಿ ತೊಡಗಿಕೊಳ್ಳುವಂತೆ ಮುನ್ನಡೆಸುತ್ತಿದ್ದಾರೆ.

ಕ್ಲೀನ್ ಮೆಜೆಸ್ಟಿಕ್ ಮಾಡಲು ಪಣ ತೊಟ್ಟಿರುವ ರವಿ ಚೆನ್ನಣ್ಣನವರ್ ಕರುನಾಡ ಸಿಂಗಂ ಆಗಿದ್ದಾರೆ ಎಂದು ಜನ ಹೇಳ್ತಿದ್ದಾರೆ.

Comments are closed.