ಕ್ರೀಡೆ

ರಾಹುಲ್‌ ದ್ರಾವಿಡ್‌ಗೂ ಪಂಗನಾಮ ಹಾಕಿದ ವಿಕ್ರಂ ಇನ್ವೆಸ್ಟ್‌ಮೆಂಟ್‌

Pinterest LinkedIn Tumblr


ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಹಲವರಿಗೆ ನೂರಾರು ಕೋಟಿ ರೂ. ವಂಚಿಸಿದ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರಿಗೂ ಭಾರಿ ವಂಚನೆ ಮಾಡಿದ್ದು, ಈ ಬಗ್ಗೆ ಸದಾಶಿವ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾನು ಕಂಪೆನಿಯಲ್ಲಿ 20 ಕೋಟಿ ರೂ ಹೂಡಿಕೆ ಮಾಡಿದ್ದೆ, ಆಧರೆ ನನಗೆ 16 ಕೋಟಿ ರೂಪಾಯಿ ವಾಪಾಸ್‌ ನೀಡಲಾಗಿದ್ದು 4 ಕೋಟಿ ರೂ ವಂಚನೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ.

ವಿಕ್ರಂ ಇನ್ವೆಸ್ಟ್‌ಮೆಂಟ್‌ ಮಾಲೀಕ ರಾಘವೇಂದ್ರ ಶ್ರೀನಾಥ್‌ ಈಗಾಗಲೇ ಬಂಧನಕೊಳಗಾಗಿದ್ದು ಎಸಿಎಂಎಂ ನ್ಯಾಯಾಲಯ ಶನಿವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ವಂಚನೆ ಸಂಬಂಧ ಬನಶಂಕರಿ ಮಾತ್ರವಲ್ಲದೇ, ವಿಜಯ ನಗರ, ಜಯನಗರ ಠಾಣೆಗಳಲ್ಲೂ ಆರೋಪಿ ಗಳ ವಿರುದ್ಧ ದೂರು ದಾಖಲಾಗುತ್ತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಆಯಾ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆ  ಸುವ ಸಾಧ್ಯತೆಯಿದೆ.

-ಉದಯವಾಣಿ

Comments are closed.