ಕ್ರೀಡೆ

ನಿಡಹಾಸ್ ಟ್ರೋಫಿ: ಸಿಂಹಳೀಯರ ವಿರುದ್ಧ ಬಾಂಗ್ಲಾಕ್ಕೆ 2 ವಿಕೆಟ್ ಗಳ ರೋಚಕ ಜಯ; ಬಾಂಗ್ಲಾ ಫೈನಲ್ ಗೆ!

Pinterest LinkedIn Tumblr

ಕೊಲಂಬೋ: ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ವಿರುದ್ಧ ಪ್ರವಾಸಿ ಬಾಂಗ್ಲಾದೇಶ 2 ವಿಕೆಟ್ ಗಳ ರೋಚಕ ಜಯ ಸಾದಿಸಿದ್ದು, ನಿಡಹಾಸ್ ತ್ರಿಕೋನ ಟಿ20 ಸರಣಿಯ ಪೈನಲ್ ಪ್ರವೇಶ ಮಾಡಿದೆ.

ಶ್ರೀಲಂಕಾ ನೀಡಿದ 160 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ, 19.5 ಓವರ್ ನಲ್ಲಿ 8 ವಿಕೆಟ್ ಕಳೆದು ಕೊಂಡು ಗುರಿ ಮುಟ್ಟಿತ್ತು. ಬಾಂಗ್ಲಾದೇಶ ಪರ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ 50 ರನ್ ಹಾಗೂ ಮಹಮದುಲ್ಲಾ ಅಜೇಯ 43 ರನ್ ಗಳ ನೆರವಿನಿಂದ ಶ್ರೀಲಂಕಾ ವಿರುದ್ಧ ರೋಚಕ ಜಯ ಸಾಧಿಸಿತು. ಅಂತಿಮ ಓವರ್ ನಲ್ಲಿ ಶ್ರೀಲಂಕಾ ಪರ ವಾಲಿದ್ದ ಪಂದ್ಯವನ್ನು ಮಹಮದುಲ್ಲಾ ತಮ್ಮ ಚಾಕಚಕ್ಯತೆಯ ಆಟದಿಂದ ತಮ್ಮತ್ತ ತಿರುಗಿಸಿ ಬಾಂಗ್ಲಾದೇಶಕ್ಕೆ 2 ವಿಕೆಟ್ ರೋಚಕ ಜಯ ತಂದಿತ್ತರು.

ಇದಕ್ಕೂ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಶ್ರೀಲಂಕಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕುಶಾಲ್ ಪೆರೇರಾ (61 ರನ್) ಮತ್ತು ತಿಸರಾ ಪೆರಾರಾ (58 ರನ್) ಅವರ ಅರ್ಧಶತಕಗಳ ನೆರವಿನಿಂದಾಗಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಇನ್ನು ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಪೈನಲ್ ಪ್ರವೇಶಿಸಿರುವ ಭಾರತ ತಂಡವನ್ನು ಬಾಂಗ್ಲಾದೇಶ ಫೈನಲ್ ನಲ್ಲಿ ಎದುರಿಸಲಿದೆ. ಇದೇ ಮಾರ್ಚ್ 18ರಂದು ಪೈನಲ್ ಪಂದ್ಯ ನಡೆಯಲಿದೆ.

Comments are closed.