ಕ್ರೀಡೆ

ಕ್ರಿಕೆಟಿಗ ಶಮಿ-ಹಸೀನ್ ಜಹಾನ್ ದಂಪತಿ ರಾದ್ದಾಂತ; ಹಸೀನ್ ಜಹಾನ್ ಮೊದಲ ಪತಿ ಹೇಳಿದ್ದೇನು…?

Pinterest LinkedIn Tumblr

ಕೋಲ್ಕತ್ತಾ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ದಂಪತಿ ರಾದ್ದಾಂತ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಈ ಮಧ್ಯೆ ಹಸೀನ್ ಮೊದಲ ಪತಿ ಎಸ್ ಕೆ ಸೈಫುದ್ದೀನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಹಸೀನ್ ಜಹಾನ್ 10ನೇ ತರಗತಿಯಲ್ಲಿದ್ದಾಗ ಸೈಫುದ್ದೀನ್ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಇಬ್ಬರ ನಡುವಿನ ಪ್ರೀತಿಯಿಂದಾಗಿ 2002ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಆದರೆ 2010ರಲ್ಲಿ ಹಸೀನ್ ಸೈಫುದ್ದೀನ್ ರಿಂದ ವಿಚ್ಛೇದನ ಪಡೆದಿದ್ದರು.

ತನ್ನ ಮೊದಲ ಪತ್ನಿ ಬಗ್ಗೆ ಸೈಫುದ್ದೀನ್ ಆಕೆ ಮಹತ್ವಾಕಾಂಕ್ಷೆಯುಳ್ಳ ಹೆಣ್ಣು ಎಂದು ಹೇಳಿದ್ದಾರೆ. ಅಲ್ಲದೆ ಈಗಲೂ ಆಕೆ ತನ್ನನ್ನು ಬಿಟ್ಟು ಹೋಗಿದ್ದು ಏಕೆ ಎನ್ನುವುದು ತಿಳಿದಿಲ್ಲ. ಕೆಲವೊಮ್ಮೆ ನಮ್ಮ ನಡುವೆಯೂ ಗಲಾಟೆಗಳು ಆಗುತ್ತಿದ್ದವು. ಆಕೆಗೆ ತನ್ನ ಕಾಲ ಮೇಲೆ ನಿಲ್ಲಬೇಕು ಎನ್ನುವ ಬಯಕೆಯಿದೆ ಎಂದರು.

ಹಸೀನ್ ವೈಯಕ್ತಿಕ ಜೀವನದಲ್ಲಿ ಈಗ ಎದ್ದಿರುವ ಸಮಸ್ಯೆಯ ಕುರಿತು ನಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಕೋಲ್ಕತ್ತದಲ್ಲಿ ಸಣ್ಣ ಅಂಗಡಿಯನ್ನು ಇಟ್ಟುಕೊಂಡಿರುವ ಸೈಫುದ್ದೀನ್ ಹೇಳಿದ್ದಾರೆ.

Comments are closed.