ಕ್ರೀಡೆ

ಪಂದ್ಯದ ವೇಳೆ ಅನುಚಿತ ವರ್ತನೆ ತೋರಿ ಕೊನೆಗೆ ಬ್ಯಾಟ್ಸ್‌ಮನ್‌ ಕ್ಷಮೆ ಕೇಳಿದ ಆಫ್ರಿದಿ

Pinterest LinkedIn Tumblr

ದುಬೈ: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಆಟಗಾರ ಸೈಫ್ ಬಾಬಾರ್ ವಿಕೆಟ್ ಪಡೆದ ಶಾಹೀದ್ ಆಫ್ರಿದಿ ಡ್ರೆಸ್ಸಿಂಗ್ ರೂಂ ಅಲ್ಲಿದೆ ಹೋಗು ಎಂದು ಬಾಬರ್ ಗೆ ಕೈ ತೋರಿಸಿ ಅನುಚಿತವಾಗಿ ವರ್ತಿಸಿದ್ದಾರೆ.

ಮೈದಾನದಲ್ಲಿ ಆಟಗಾರರು ಕೆಲವೊಮ್ಮೆ ಅನುಚಿತವಾಗಿ ವರ್ತಿಸುವುದು ಸಹಜ. ಆದರೆ ಕೆಲವೊಂದು ಇದು ಅತೀರೆಕಕ್ಕೆ ಹೋದಾಗ ಅವರ ದುರ್ವತನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತದೆ.

ಮೈದಾನದಲ್ಲಿ ತಾವು ನಡೆದುಕೊಂಡಿದ್ದರಿಂದ ಬೇಸರಗೊಂಡ ಮಾಜಿ ಪಾಕ್ ಆಟಗಾರ ಶಾಹೀದ್ ಆಫ್ರಿದಿ ಟ್ವೀಟರ್ ನಲ್ಲಿ ಬಾಬರ್ ಕ್ಷಮೆ ಕೇಳಿದ್ದಾರೆ. ಬಾಬರ್ ನನ್ನನ್ನು ಕ್ಷಮಿಸು. ಆ ವೇಳೆ ನಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯಲಿಲ್ಲ. ನಾನು ನಮ್ಮ ಯುವ ಪಡೆಯನ್ನು ಬೆಂಬಲಿಸುತ್ತೇನೆ. ಗುಡ್ ಲಕ್ ಎಂದು ಟ್ವೀಟ್ ಮಾಡುವ ಮೂಲಕ ಆಫ್ರಿದಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ.

ಶಾಹೀದ್ ಆಫ್ರಿದಿ ಅವರ ಟ್ವೀಟ್ ಇದೀಗ ವೈರಲ್ ಆಗಿದ್ದು ನೆಟಿಜೆನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಆಫ್ರಿದಿ ಮೂರು ವಿಕೆಟ್ ಗಳನ್ನು ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು.

Comments are closed.