ಕ್ರೀಡೆ

ಈಜು ತರಬೇತುದಾರ ಪ್ರಶಾಂತ್ ಗೆ ಮೂರು ವರ್ಷ ಅಮಾನತು ಶಿಕ್ಷೆ

Pinterest LinkedIn Tumblr


ದೆಹಲಿ: ಮಹಿಳೆಯರು ಈಜುವುದನ್ನು ವೀಡಿಯೋ ಚಿತ್ರೀಕರಣ ಮಾಡಿದ ಆರೋಪ ದಲ್ಲಿ 2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚು ಪಡೆದ ಪ್ಯಾರಾ ಈಜುಗಾರ ಪ್ರಶಾಂತ್ ಕರ್ಮಾಕರ್ ರನ್ನು ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ ಮೂರು ವರ್ಷಗಳಿಗೆ ಅಮಾ ನತು ಮಾಡಿದೆ.

ಇದೀಗ ಕೋಚ್ ಆಗಿ ಬದಲಾಗಿರುವ ಕರ್ಮಾಕರ್ ಅವರು ಮಹಿಳೆಯರ ಈಜುವುದನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ನಿಷೇಧ ಎದುರಿಸುವಂತಾಗಿದೆ. 2010ರ ಕಾಮ ನ್ವೆಲ್ತ್ ಗೇಮ್ಸ್ ನಲ್ಲಿ ಕಂಚು ಪಡೆದ ಕರ್ಮಾಕರ್ 2003ರ ವಿಶ್ವ ಈಜು ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದುಕೊಂಡಿದ್ದರು.

ಕರ್ಮಾಕರ್ ಅವರು, ಈಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 37ಕ್ಕೂ ಅಧಿಕ ಪದಕ ಗಳನ್ನು ಜಯಿಸಿದ್ದಾರೆ. 2006, 2010 ಮತ್ತು 2014ರ ಏಷ್ಯನ್ ಗೇಮ್ಸ್ ನಲ್ಲಿ ಸತತ ಮೂರು ಪದಕಗಳನ್ನು ಜಯಿಸಿದ್ದರು. ಕರ್ಮಾಕರ್ 2016ರ ರಿಯೋ ಪ್ಯಾರಾಲಿಂಪಿಕ್ಸ್ ಗೇಮ್ಸ್ ನಲ್ಲಿ ಭಾಗವಹಿಸಿದ ಭಾರತದ ಈಜು ತಂಡದ ಕೋಚ್ ಆಗಿ ದ್ದಾರೆ. ಕರ್ಮಾಕರ್ 2011ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2015ರಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿಗೆ ಭಾಜನರಾಗಿದ್ದರು.

Comments are closed.